ಟೀಮ್ ಇಂಡಿಯಾ ಬೌಲಿಂಗ್ ಅಬ್ಬರಕ್ಕೆ ಪೆವಿಲಿಯನ್ ನತ್ತ ಪರೇಡ್ ನಡೆಸಿದ ಲಂಕಾ ಆಟಗಾರರರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ತತ್ತರಿಸಿದ್ದು,ಕೇವಲ 55 ರನ್‌ಗೆ ಆಲೌಟ್ ಆಗಿದೆ. ಇತ್ತ ರೋಹಿತ್ ಪಡೆ ಮತ್ತೊಂದು ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿಪಡಿಸಿದೆ. 302 ರನ್​ಗಳ ಜಯಗಳಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.

ಭಾರತದ ಬೃಹತ್ ಮೊತ್ತಕ್ಕೆ ಚೇಸಿಂಗ್ ಇಳಿದ ಶ್ರೀಲಂಕಾ ಆಟಗಾರರರು ಒಬ್ಬರ ಮೇಲೆ ಒಬ್ಬರು ಪೆವಿಲಿಯನ್ ನತ್ತ ಪರೇಡ್ ನಡೆಸಿದರು.

ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಪಥುಮ್ ನಿಸ್ಸಾಂಕ ವಿಕೆಟ್ ಕಬಳಿಸಿದರು. ಇದರ ಬೆನ್ನಲ್ಲೇ ಮೊಹ್ಮದ್ ಸಿರಾಜ್ ದಾಳಿಗೆ ಶ್ರೀಲಂಕಾ ತತ್ತರಿಸಿತು. ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್ ಹಾಗೂ ಸದೀರಾ ಸಮರವಿಕ್ರಮ ವಿಕೆಟ್ ಪತನಗೊಂಡಿತು. 3 ರನ್‌ಗೆ ಶ್ರೀಲಂಕಾದ 4 ವಿಕೆಟ್ ಕಳೆದುಕೊಂಡಿತ್ತು.

ಬುಮ್ರಾ, ಸಿರಾಜ್ ಬಳಿಕ ಮೊಹಮ್ಮದ್ ಶಮಿ ಮಿಂಚಿನ ದಾಳಿ ಮತ್ತೆ ಶ್ರೀಲಂಕಾ ತಂಡವನ್ನು ಯಾವುದೇ ಹಂತದಲ್ಲಿ ಚೇತರಿಸಿಕೊಳ್ಳಲು ಬಿಡಲಿಲ್ಲ. ಚಾರಿತ್ ಅಸಲಂಕಾ ಹಾಗೂ ದಶನ್ ಹೇಮಂತಾ ಕೂಡ ವಿಕೆಟ್ ಕೈಚೆಲ್ಲಿದರು. ದುಷ್ಮಂತ್ ಚಮೀರಾ ಶೂನ್ಯಕ್ಕೆ ವಿಕೆಟ್ ಕೈಚೆಲ್ಲಿದರು. ಇತ್ತ ಕಸೂನ್ ರಾಜೀತಾ ಹಾಗೂ ಮಹೀಶಾ ತೀಕ್ಷಾನ ಜೊತೆಯಾಟದಿಂದ ಶ್ರೀಲಂಕಾ ವಿಶ್ವಕಪ್ ಟೂರ್ನಿಯ ಅತೀ ಕಡಿಮೆ ಮೊತ್ತದ ಮುಖಭಂದಿಂದ ಪಾರಾಯಿತು. ಕಸೂನ್ ರಾಜೀತ 14 ರನ್ ಸಿಡಿಸಿ ಔಟಾದರು. ಇತ್ತ ದಿಲ್ಶಾನ್ ಮಧುಶಂಕ 5 ರನ್ ಸಿಡಿಸಿ ನಿರ್ಗಮಿಸಿದರು. ತೀಕ್ಷಾನ ಅಜೇಯ 12 ರನ್ ಸಿಡಿಸಿದರು. ಶ್ರೀಲಂಕಾ 19.4 ಓವರ್‌ಗಳಲ್ಲಿ 55 ರನ್‌ಗೆ ಆಲೌಟ್ ಆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!