ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಯುದ್ಧ ಘೋಷಣೆ ಮಾಡಿದ ಬೆನ್ನಲ್ಲೇ ಈಗ ಉಕ್ರೇನ್ ನ ಎರಡು ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಸ್ಫೋಟದ ಸದ್ದು ಕೇಳಿಬಂದಿದೆ.
ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟಿರಿ ಕಾರ್ಯಾಚರಣೆ ಘೋಷಣೆ ಮಾಡಿದ್ದಾರೆ. ಈ ಯುದ್ಧವು ಉಕ್ರೇನ್ ನಿಂದ ಬರುತ್ತಿರುವ ಬೆದರಿಕೆಗಳಿಗೆ ಉತ್ತರವಾಗಿರುತ್ತದೆ. ಉಕ್ರೇನ್ ನಾಶ ಮಾಡುವ ಗುರಿ ನಮಗಿಲ್ಲ. ಆದರೆ ರಕ್ತಪಾತದ ಜವಾಬ್ದಾರಿ ಉಕ್ರೇನ್ ಹೊರಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದರು.
ಇದೇ ಸಮಯದಲ್ಲಿ ಇತರ ರಾಷ್ಟ್ರಗಳಿಗೆ ವಾರ್ನಿಂಗ್ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್, ಉಕ್ರೇನ್ ಹಾಗೂ ರಷ್ಯಾ ನಡುವೆ ಮಿಲಿಟರಿ ಕಾರ್ಯಾಚರಣೆ ನಡೆಯಲಿದೆ. ಬೇರೆ ದೇಶಗಳು ಅಡ್ಡಬಂದರೆ ಪರಿಣಾಮ ಭೀಕರವಾಗಿರುತ್ತದೆ ಎಂದಿದ್ದಾರೆ.
ಉಕ್ರೇನ್ ನಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ಅಮೆರಿಕದ ಬಿಎನ್ ಒ ಸುದ್ದಿ ಸಂಸ್ಥೆ ಮಾಹಿತಿ ಹಂಚಿಕೊಂಡಿದ್ದು, ಉಕ್ರೇನ್ ನ ಪೂರ್ವ ಭಾಗದಲ್ಲಿ ಸ್ಫೋಟ ನಡೆದಿದೆ ಎಂದು ಟ್ವೀಟ್ ಮಾಡಿದೆ.
BREAKING: Large explosions reported near Ukraine's Kharkiv pic.twitter.com/fJYOspt5J7
— BNO News (@BNONews) February 24, 2022