ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಉಕ್ರೇನ್ ನಡುವಿನ ಯುದ್ಧ ಸಮರ ದಿನೇ ದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆ ಪ್ರಸ್ತುತ ಪರಿಸ್ಥಿತಿ ಕಂಡು ಉಕ್ರೇನ್ ತೊರೆಯುವಂತೆ ಕೀವ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯ ಪ್ರಜೆಗಳಿಗೆ ಸೂಚಿಸಿದೆ.
ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಅಗತ್ಯವಲ್ಲದ ಉದ್ದೇಶಗಳಿಗಾಗಿ ದೇಶದಲ್ಲಿ ನೆಲೆಸಿರುವ ಇತರ ನಾಗರಿಕರು ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ.
‘ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಉಕ್ರೇನ್ನಾದ್ಯಂತ ಯುದ್ಧಗಳ ಉಲ್ಬಣವನ್ನ ಗಮನದಲ್ಲಿಟ್ಟುಕೊಂಡು, ಭಾರತೀಯ ಪ್ರಜೆಗಳಿಗೆ ಉಕ್ರೇನ್‍ಗೆ ಪ್ರಯಾಣಿಸದಂತೆ’ ಸೂಚಿಸಲಾಗಿದೆ.
Advisory for Indian Nationals@MEAIndia @DDNewslive @DDNational @PIB_India @IndianDiplomacy pic.twitter.com/bu4IIY1JNt
— India in Ukraine (@IndiainUkraine) October 19, 2022
ಉಕ್ರೇನ್‍ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಬೇಗನೆ ಉಕ್ರೇನ್ ತೊರೆಯುವಂತೆ ಸಲಹೆ ನೀಡಿದೆ.