ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದಲ್ಲಿ ಕೋವಿಡ್ ಸಾಂಕ್ರಾಮಿಕವು ಮತ್ತೆ ಉಲ್ಬಣಿಸಿದೆಯೇ? ಅಂದರೆ ಹೌದು ಅಂತಿದಾರೆ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವೈದ್ಯಕೀಯ ತಜ್ಞರು. ಯುಎಸ್‌ನಲ್ಲಿ 7,100 ಕೋವಿಡ್ ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಾಗಲಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಎಚ್ಚರಿಸಿದೆ.
ಜುಲೈ 21 ರ ಹೊತ್ತಿಗೆ, ಕೋವಿಡ್ ರೋಗಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಕೊರೋನವೈರಸ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ, ಜನರು ಮಾಸ್ಕ್ ಧರಿಸಿ ಲಾಸ್ ಏಂಜಲೀಸ್‌ನಲ್ಲಿ ಶಾಪಿಂಗ್ ಮಾಡುತ್ತಿರುವುದು ಕಂಡು ಬಂತು. ಆರರಿಂದ ಏಳು ತಿಂಗಳ ನಿರಂತರ ಕುಸಿತದ ನಂತರ, ಕರೋನವೈರಸ್ ಮತ್ತೆ ಹೆಚ್ಚಾಗಲು ಪ್ರಾರಂಭಿಸುತ್ತಿದೆ ಎಂದು ಅಟ್ಲಾಂಟಾದಲ್ಲಿ ಸಿಡಿಸಿಯ ಕೋವಿಡ್ ವ್ಯವಸ್ಥಾಪಕ ಡಾ. ಬ್ರೆಂಡನ್ ಜಾಕ್ಸನ್ ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಕರೋನಾ ಪ್ರಕರಣಗಳು ಪ್ರಾರಂಭವಾಗಿದ್ದು, ಮತ್ತು ಈ ವಾರ ಕೋವಿಡ್ ರೋಗಿಗಳು ಆಸ್ಪತ್ರೆಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು ಡಾ. ಬ್ರೆಂಡನ್ ಹೇಳಿದ್ದಾರೆ. ಹೆಚ್ಚಿನ ಅಪಾಯದ ಗುಂಪಿನಲ್ಲಿರುವವರಿಗೆ XBB ಉಪ ರೂಪಾಂತರದ ಬೂಸ್ಟರ್ ಡೋಸ್ ಅನ್ನು ವೈದ್ಯರು ಸೂಚಿಸಿದ್ದಾರೆ.