ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಸೇರಿದಂತೆ ಭಾರತದ ಹಲವು ನಗರಗಳ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ ಭಾರತೀಯ ಸೇನೆಯ ಪ್ರತ್ಯುತ್ತರ ನೀಡಿದೆ. ಲಾಹೋರ್ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ನಡೆಸಿದೆ.
ಪಾಕ್ ಪ್ರಯೋಗ ಮಾಡಿದ ಜೆಟ್, ಐವತ್ತಕ್ಕೂ ಹೆಚ್ಚು ಡ್ರೋನ್‌ಗಳು, ಶೆಲ್ ಮತ್ತು ಕ್ಷಿಪಣಿಗಳು ಟುಸ್ ಪಟಾಕಿಯಂತೆ ನೆಲಕ್ಕೆ ಉರುಳಿವೆ. ಪಾಕ್‌ನ ಅಷ್ಟು ದಾಳಿಯೂ ವಿಫಲವಾಗಿದ್ದು ಭಾರತದ ವಾಯು ನೆಲೆಗಳಾದ ಪಠಾಣ್ ಕೋಟ್, ಜೈಸಲ್ಮೇರ್ ಸುರಕ್ಷಿತವಾಗಿವೆ ಎಂಬ ಮಾಹಿತಿಯಿದೆ. ಜೈಸಲ್ಮೇರ್‌ನಲ್ಲಿ 200 ಕ್ಷಿಪಣಿ ದಾಳಿಗೆ ಪಾಕ್ ನವರು ಯತ್ನಿಸಿದರೂ ಅದು ವಿಫಲವಾಗಿದೆ. ಇನ್ನು ದಾಳಿ ನಡೆದ ವಿವಿಧ ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು ಬ್ಲ್ಯಾಕ್ ಔಟ್ ಘೋಷಿಸಲಾಗಿದೆ. ಸ್ಥಳೀಯ ನಾಗರಿಕರನ್ನು ಸುರಕ್ಷಿತವಾದ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಸ್ವತಃ ಪಾಕಿಸ್ತಾನದ ಸೇನೆಯು ಭಾರತ ಜೆಟ್ ವಿಮಾನಗಳನ್ನು ಹೊಡೆದುರುಳಿಸಿರುವುದನ್ನು ಖಚಿತಪಡಿಸಿದೆ.
ಇದರ ಬೆನ್ನಲ್ಲೇ ಭಾರತ ಲಾಹೋರ್‌ನತ್ತ ಭಾರತದ ಕ್ಷಿಪಣಿಗಳು ಧಾವಿಸಿವೆ. ಜತೆಗೆ ಸಿಯಾಲ್‌ಕೋಟ್ ಮೇಲೂ ದಾಳಿ ನಡೆಸಿದೆ. ಉಗ್ರ ನೆಲೆಯನ್ನು ಗುರಿಯಾಗಿಸಿ ಈ ದಾಳಿ ನಡೆಯುತ್ತಿದೆ. ಈ ಮೂಲಕ ಭಾರತದ ಸೇನೆಯು ಪಾಕಿಸ್ತಾನಕ್ಕೆ ಖಡಕ್ ಉತ್ತರ ನೀಡಲು ಮುಂದಾಗಿದೆ.