ಹೊಸದಿಗಂತ ವರದಿ, ಕಲಬುರಗಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೈಂ ರೇಟ್ ಕಂಟ್ರೋಲ್, ಕಾನೂನು ಸುವ್ಯವಸ್ಥೆ ಮತ್ತು ಡ್ರಗ್ಸ್ ಕಂಟ್ರೋಲ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
ಬುಧವಾರ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಶಾನ್ಯ ವಲಯ ಐಜಿಪಿ ವಿಭಾಗದ ಪೋಲಿಸ್ ಅಧಿಕಾರಿಗಳ ಸಭೆ ಮಾಡಿದ್ದು, ಕಲಬುರಗಿ, ಬೀದರ್, ಯಾದಗಿರಿ ಜಿಲ್ಲೆಗಳ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಪೋಲಿಸ್ ಅಧಿಕಾರಿಗಳು ಭಾಗವಹಿಸಿದ್ದರು ಎಂದರು.
ಮಹಿಳಾ ಕಾನ್ಸಸ್ಟೇಬಲ್ ಮೊಬೈಲ್ ಕಾಲ್ ಸಿಡಿಆರ್ ಕಳ್ಳತನ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು,ಪೋಲಿಸರೇ ಈ ರೀತಿ ತಪ್ಪು ಮಾಡಿದ್ದು, ನಿಜಕ್ಕೂ ಒಳ್ಳೆಯ ಸಂಗತಿಯಲ್ಲ. ತಕ್ಷಣವೇ ಸಿಡಿಆರ್ ಕದ್ದಿರುವ ಆರೋಪದ ಮೇಲೆ ಇಬ್ಬರು ಕಾನ್ಸಸ್ಟೇಬಲ್ ಗಳನ್ನು ಅಮಾನತು ಮಾಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.
ಇನ್ನೂ ಸಿಡಿಆರ್ ಖಾಸಗಿ ವ್ಯಕ್ತಿಗೆ ನೀಡಿರುವ ಪ್ರಕರಣದ ಚರ್ಚೆ ನಡೆಸಿದಲ್ಲದೇ,ಈ ಕುರಿತು ಸಮಗ್ರ ತನಿಖೆ ಮಾಡುವಂತೆ ಸೂಚಿಸಿದ್ದೇನೆ.ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.