ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕಿಡ್ನ್ಯಾಪ್ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್ ಆಗಿದ್ದಾರೆ.
ದರ್ಶನ್ ವಕೀಲ ನಾರಾಯಣಸ್ವಾಮಿ ಭೇಟಿಯಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಬಗ್ಗೆ ದರ್ಶನ್ ಜೊತೆ ವಕೀಲರು ಚರ್ಚಿಸಿದ್ದಾರೆ. ಈಗಷ್ಟೇ ತನಿಖೆ ಆರಂಭವಾಗಿದೆ. ಅವರನ್ನು ಇನ್ನೂ ಅರೆಸ್ಟ್ ಕೂಡ ಮಾಡಿಲ್ಲ.ಕೇವಲ ತನಿಖೆಗೆ ಕರೆದಿದ್ದಾರೆ ಅಷ್ಟೇ. ಅವರು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರಿಗೆ ಗುಮಾನಿ ಬಂದಾಗ ಎಲ್ಲರನ್ನೂ ವಿಚಾರಣೆಗೆ ಕರೆಯುತ್ತಾರೆ. ಅದೇ ರೀತಿ ದರ್ಶನ್ ಅವರನ್ನು ಪೊಲೀಸರು ತನಿಖೆಗೆ ಕರೆದಿದ್ದಾರೆ. ಅವರಿಗೆ ಸೆಲೆಬ್ರಿಟಿ ಸ್ಟೇಟಸ್ ಇದೆ ಅನ್ನೋದು ಬಿಟ್ಟರೆ ಅವರು ಕೂಡ ಸಾಮಾನ್ಯ ವ್ಯಕ್ತಿ ಅಷ್ಟೆ ಎಂದು ವಕೀಲರು ಹೇಳಿದ್ದಾರೆ.