ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿರುವುದನ್ನು ಖಂಡಿಸಿ ರಾಮನಗರ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣದ ಮೇಜರ್ ಬೆಳವಣಿಗೆಯಂತೆ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ತನ್ವೀರ್ ಹುಸೇನ್‌ರನ್ನು ಅಮಾನತು ಮಾಡಲಾಗಿದೆ.
ರಾಮನಗರದ 40 ವಕೀಲರ ವಿರುದ್ಧ ಐಜೂರು ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ತನ್ವೀರ್ ಹುಸೇನ್ ಅವರು ಎಫ್‌ಐಆರ್ ದಾಖಲಿಸಿದ್ದರು. ಆದರೆ ಎಫ್‌ಐಆರ್ ರದ್ದು ಹಾಗೂ ಪಿಎಸ್‌ಐ ಸಸ್ಪೆಂಡ್ ಮಾಡುವಂತೆ
ಕೋರಿ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಸತತ ಮೂರು ದಿನಗಳಿಂದ ಧರಣಿ ತಡೆಯುತ್ತಿದ್ದು, ಇಂದು ತನ್ವೀರ್ ಹುಸೇನ್‌ರನ್ನು ಅಮಾನತು ಮಾಡಲಾಗಿದೆ.