January17, 2026
Saturday, January 17, 2026
spot_img

ನಾಯಕತ್ವದ ಗೊಂದಲ ಲೋಕಲ್‌ನವರೇ ಸೃಷ್ಟಿಮಾಡಿಕೊಂಡದ್ದು: ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಣಿಸಿಕೊಳ್ಳುತ್ತಿರುವ ಗೊಂದಲಕ್ಕೆ ಹೈಕಮಾಂಡ್ ಕಾರಣವಲ್ಲ, ಇದು ಸ್ಥಳೀಯ ಮಟ್ಟದಲ್ಲೇ ಲೋಕಲ್‌ನವರೇ ಹುಟ್ಟುಹಾಕಿದ ಸಮಸ್ಯೆ ಎಂದು ಅವರು ಹೇಳಿದ್ದಾರೆ. ಇಂತಹ ವಿಷಯಗಳನ್ನು ದೆಹಲಿಗೆ ತೆಗೆದುಕೊಂಡು ಹೋಗದೆ ಇಲ್ಲಿನ ನಾಯಕರು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ಅವರ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ–ಡಿಸಿಎಂ ಬಣಗಳ ನಡುವಿನ ಮಾತಿನ ಯುದ್ಧ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಮುಖ್ಯಮಂತ್ರಿ ಸ್ಥಾನ, ಅವಧಿ ಮತ್ತು ಭವಿಷ್ಯದ ನಾಯಕತ್ವದ ಕುರಿತು ವಿಭಿನ್ನ ಹೇಳಿಕೆಗಳು ಹೊರಬರುತ್ತಿರುವ ಬೆನ್ನಲ್ಲೇ, ಖರ್ಗೆ ಅವರ ಈ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ. “ಎಲ್ಲದಕ್ಕೂ ಹೈಕಮಾಂಡ್ ಎಂದು ಹೇಳುವುದು ಸರಿಯಲ್ಲ. ಸಮಸ್ಯೆ ಸೃಷ್ಟಿ ಮಾಡಿದ್ದು ಇಲ್ಲಿನ ನಾಯಕರೇ. ಪರಿಹಾರವೂ ಇಲ್ಲಿಯೇ ಬರಬೇಕು” ಎಂದು ಹೇಳಿದ್ದಾರೆ.

ಇದೇ ವೇಳೆ ಪಕ್ಷದ ಒಳಗಿನ ಅಧಿಕಾರದ ಒಳಜಗಳಗಳ ಬಗ್ಗೆ ಕೂಡ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಯಾರೋ ಒಬ್ಬ ನಾಯಕನಿಂದ ನಿರ್ಮಾಣವಾದದ್ದಲ್ಲ. ಇದು ಕಾರ್ಯಕರ್ತರ ಶ್ರಮದಿಂದ ಬೆಳೆದ ಸಂಘಟನೆ. ಹೀಗಾಗಿ “ನನ್ನಿಂದಲೇ ಪಕ್ಷ ಬೆಳೆಯಿತು” ಅಥವಾ “ನಾನೇ ಅಧಿಕಾರಕ್ಕೆ ತಂದೆ” ಎಂಬ ಭಾವನೆ ಯಾರಲ್ಲೂ ಇರಬಾರದು ಎಂದು ಅವರು ಹೇಳಿದ್ದಾರೆ.

Must Read

error: Content is protected !!