ಹೊಸದಿಗಂತ ವರದಿ,ಮಂಡ್ಯ :
ಎಲ್ಲ ರೀತಿಯ ಧರ್ಮ ಆಚರಿಸಲು ನಮ್ಮ ಭಾರತದಲ್ಲಿ ಸ್ವಾತಂತ್ರ್ಯವಿದೆ. ನಮ್ಮ ಧರ್ಮವನ್ನ ಆಚರಿಸಲು ಬಿಡಿ ಎಂದು ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಪ್ರತಿಕ್ರಿಯೆ ನೀಡಿದರು.
ಹುಡುಗರ ಮುಂದೆ ಅಲ್ಲಾಹು ಅಕ್ಬರ್’ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್ ಖಾನ್ ಇಂದು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದು, ನಾನು ಅಸೈನ್ಮೆಂಟ್ ಕೊಡಲು ಕಾಲೇಜಿಗೆ ಹೋಗಿದ್ದು. ಆಗ ಕೆಲವು ಹುಡುಗರ ಗುಂಪು ನನ್ನನ್ನು ನೋಡಿ ನೀನು ಕಾಲೇಜಿಗೆ ಬರಬೇಡ ಎಂದು ಜಗಳವಾಡಲು ಪ್ರಾರಂಭಿಸಿದರು. ಕಾಲೇಜಿಗೆ ನೀನು ಹೋಗಬೇಕಾದರೆ ಬುರ್ಕಾ ತೆಗೆದುಹೋಗು. ಅಲ್ಲ, ನೀನು ಬುರ್ಕಾದಲ್ಲಿ ಇರಬೇಕು ಎಂದರೆ ಮನೆಗೆ ಹೋಗು ಎಂದು ತಿಳಿಸಿದರು.
ಆದರೂ ನಾನು ಕಾಲೇಜ್ ಒಳಗೆ ಹೋದೆ. ಆದರೆ ಅವರು ನನ್ನ ಕಿವಿ ಹತ್ತಿರ ಬಂದು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗುತ್ತಿದ್ದರು. ಅದಕ್ಕೆ ನಾನು ಅಲ್ಲಾಹು ಅಕ್ಬರ್’ ಎಂದು ಕೂಗಿದೆ. ಈ ವೇಳೆ ನನ್ನ ಕಾಲೇಜಿನ ಪ್ರತಿಯೊಬ್ಬರು ನನ್ನನ್ನು ಬೆಂಬಲಿಸಿದ್ದು, ರಕ್ಷಿಸಿದರು ಎಂದು ವಿವರಿಸಿದರು.
ಹುಡುಗರು ಜೈಶ್ರೀರಾಮ್ ಎಂದು ಕೂಗುತ್ತಿದ್ದರು. ಆದರೆ ನಾನು ಅದನ್ನು ಲೆಕ್ಕಿಸದೆ ಅಲ್ಲಾಹು ಅಕ್ಬರ್ ಎಂದು ಧೈರ‌್ಯದಿಂದ ಒಳಗೆ ಹೋದೆ. ಇದಕ್ಕೂ ಮುನ್ನ ನನ್ನ ನಾಲ್ಕು ಮಂದಿ ಸ್ನೇಹಿತರು ಕಾಲೇಜಿಗೆ ಬಾರದೆ ಅಳುತ್ತಾ ವಾಪಸ್ಸು ಮನೆಗೆ ಹೋದರು. ಅವರು ಕೂಗಿದ್ದು ತಪ್ಪಿಲ್ಲಘಿ, ನಾನು ಕೂಗಿದ್ದೂ ತಪ್ಪಿಲ್ಲಘಿ. ನಾನು ನನ್ನ ಧರ್ಮ ಪಾಲನೆ ಮಾಡಿದ್ದೇನೆ. ಅವರು ಕಿವಿ ಹತ್ತಿರ ಬಂದು ಘೋಷಣೆ ಕೂಗಿದರು. ಆ ಕ್ಷಣದಲ್ಲಿ ನನಗೆ ಯಾವ ಭಯವೂ ಆಗಲಿಲ್ಲಘಿ. ಏಕೆ ಭಯ ಪಡಬೇಕು ಎಂದು ಪ್ರಶ್ನಿಸಿದರು.