ಹೊಸದಿಗಂತ ಡಿಜಿಟಲ್ ಡೆಸ್ಕ್:
ರೆಸ್ಟೋರೆಂಟ್ಗಳಲ್ಲಿ ಫೋನ್ ಇಲ್ಲದೆ ಹೋಗೋದು ಅಂದ್ರೆ? ತಮಾಷೆನಾ? ಊಟದ ಫೋಟೊ ತಗೀಬೇಕು, ನಮ್ಮ ಫೋಟೊ ತಗೋಬೇಕು, ಸೋಶಿಯಲ್ ಮೀಡಿಯಾ ಬಿಡೋದು ಹೇಗೆ?
ಟೋಕಿಯೋದ ರೆಸ್ಟೋರೆಂಟ್ ಒಂದರಲ್ಲಿ ಮೊಬೈಲ್ ಹುಚ್ಚು ನೋಡೋಕಾಗ್ದೆ ಮೊಬೈಲ್ನ್ನೇ ಬ್ಯಾನ್ ಮಾಡಿದ್ದಾರೆ. ಊಟ ತಂದಿಟ್ಟು ನಿಮಿಷಗಳೇ ಆದರೂ ಯಾರೂ ಅದನ್ನು ತಿನ್ನದೆ ಫೋಟೊ ತೆಗೆಯೋದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳೋದು ತದನಂತರ ಆಹಾರ ತಿಂದು ತಣ್ಣಗಾಗಿದೆ ಎನ್ನೋದು!
ಇದರಿಂದ ಬೇಸತ್ತ ಮಾಲೀಕರು ಮೊಬೈಲ್ ಇದ್ದರೆಯೇ ಸಮಸ್ಯೆ ಎಂದು ಅದನ್ನೇ ಬ್ಯಾನ್ ಮಾಡಿದ್ದಾರೆ. ರೆಸ್ಟೋರೆಂಟ್ ದೆಬು ಜಾನ್ನಲ್ಲಿ ತಿನ್ನುವ ವೇಳೆ ಮೊಬೈಲ್ ನೋಡುವಂತಿಲ್ಲ.
ನಮ್ಮ ಕಣ್ಣೆದುರೇ ಆಹಾರ ತಣ್ಣಗಾಗುತ್ತಿತ್ತು. ರೆಸ್ಟೋರೆಂಟ್ ತುಂಬಿ ತುಳುಕುವಾಗ ಮೊಬೈಲ್ ನೋಡ್ತಾ ಆಹಾರವನ್ನೂ ತಿನ್ನದೇ ಸಮಯ ಕೊಲ್ಲುತ್ತಾರೆ. ಊಟವೂ ತಣ್ಣಗಾಗುತ್ತದೆ ಎಂದು ರೆಸ್ಟೋರೆಂಟ್ ಮಾಲೀಕರು ಹೇಳುತ್ತಾರೆ.