ಹೊಸದಿಗಂತ ವರದಿ,ರಾಯಚೂರು :
ಭಾರತ ವಿರೋಧಿ ಘೋಷಣೆಗಳನ್ನು ಯಾರೇ ಕೂಗಿದರೂ ಅದು ತಪ್ಪೇ. ವಿಧಾನಸಭೆಯಲ್ಲಿ ಜರುಗಿದ ಪ್ರಕರಣಕ್ಕೆ ಸಂಬoಧಿಸಿದoತೆ ಸರ್ಕಾರ ಎಫ್‌ಎಸ್‌ಎಲ್ ವರದಿ ಆಧಾರದ ಮೇಲೆ ಕಾನೂನು ಕ್ರಮಗಳನ್ನು ಕೈಗೊಂಡಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ನಗರದಲ್ಲಿ ಸಾರಿಗೆ ಇಲಾಖೆಯ ಗ್ರಾಮೀಣ ಘಟಕ-೧ ನ್ನು ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂಡ್ಯದಲ್ಲಿ ಅವರ ಕಾರ್ಯಕರ್ತನೇ ಪಾಕಿಸ್ಥಾನ ಜಿಂದಾಬಾದ್ ಎಂದಾಗ ಪ್ರಕರಣವನ್ನು ದಾಖಿಲಿಸಿದ್ದಿಲ್ಲ ಎನ್ನುವುದನ್ನು ಬಿಜೆಪಿ ಮರೆಯಬಾರದು ಎಂದರು.
ವಿಧಾನಸಭೆಯಲ್ಲಿ ಪಾಕಿಸ್ಥಾನ ಜಿಂದಾಬಾದ್ ಘೋಷಣೆಯನ್ನು ಕೂಗಿದ ವ್ಯಕ್ತಿಗಳನ್ನು ಎಫ್‌ಎಎಸ್‌ಎಲ್ ವರದಿ ಆಧಾರದ ಮೇಲೆ ಪ್ರಕರಣವನ್ನು ದಾಖಿಲಿಸಲಾಗಿದೆ. ಬಂಧಿಸಿಲಾಗಿದೆ ಮುಂದೆ ಅವರಿಗೆ ಶಿಕ್ಷೆಯೂ ಆಗಲಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ನಸೀರ್‌ಹುಸೇನ ಅವರ ಮೇಲೂ ಪ್ರಕರಣ ದಾಖಲಿಸಬೇಕೆನ್ನುವುದು ಎಷ್ಟು ಸರಿ. ಚುನಾವಣೆಯಲ್ಲಿ ಆಯ್ಕೆ ಆದ ಸಂದರ್ಭದಲ್ಲಿ ಯಾವುದೋ ಊರಿಂದ ಬಂದ ವ್ಯಕ್ತಿ ಘೋಷಣೆಯನ್ನು ಕೂಗಿದರೆ ಅದಕ್ಕೆ ಅವರನ್ನು ಏಕೆ ಹೊಣೆಗಾರರನ್ನಾಗಿ ಮಾಡಬೇಕು. ಪಾಕ್ ಪರ ಘೋಷಣೆಯನ್ನು ಕೂಗಿದ ವ್ಯಕ್ತಿಯ ಮೇಲೆ ಕ್ರಮ ಜರುಗಿಸಲಾಗುತ್ತಿದೆಯಲ್ಲಿ ಎಂದು ಹೇಳಿದರು.
ಬಿಎಸ್‌ವಾಯ್ ಸಿಎಂ ಆಗಿದ್ದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ೨೦೦೮ ಜು.೨೫, ಬೆಂಗಳೂರಲ್ಲಿ ೨೦೧೦ ಏ.೧೦ ಸರಣಿ ಬಾಂಬ್ ಬ್ಲಾಸ್ಟ್, ೨೦೧೩ ಏ.೧೭ ಮಲ್ಲೇಶ್ವರಂ ಬಳಿ ಜಗದೀಶ ಶೆಟ್ಟರ ಸಿಎಂ ಆಗಿದ್ದ ಸಂದರ್ಭದಲ್ಲಿ, ಮಂಗಳೂರು ವಿಮಾನ ನಿಲ್ದಾಶಣದಲ್ಲಿ. ತುಂಗಾ ಪ್ರಯೋಗಾ ಬಾಂಬ್ ೨೦೨೨ರ ಆ.೨೬ ಬೊಮ್ಮಾಯಿ ಸಿಎಂ ಆದಿದ್ದ ಸಂದರ್ಭಲ್ಲಿ, ೨೦೨೨ ಅ.೧೯ ಮಂಗಳೂರಲ್ಲಿ ಕುಕ್ಕರ ಬಾಂಬ್ ಬ್ಲಾಸ್ಟ್ ಸೇರಿದಂತೆ ಒಟ್ಟು ಆರು ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದವು ಹಾಗೂ ಪುಲ್ವಾಮಾ ಬಾಂಬ್ ಬ್ಲಾಸ್ಟ್ ಆಗಿತ್ತು. ಈ ಸರ್ಕಾರದ ಅವಧಿಯಲ್ಲಿ ಆಗಿರುವ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಒಂದೆರಡು ದಿನಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಬಸನಗೌಡ ದದ್ದಲ್ ಸೇರಿದಂತೆ ಇತರರಿದ್ದರು.