ಹೊಸದಿಗಂತ ವರದಿ,ಯಲ್ಲಾಪುರ :
ದನಕರುಗಳನ್ನು ಹೊಲಕ್ಕೆ ಬಿಡಲು ಹೋದ ಇಬ್ಬರು ಯುವಕರ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಅರಣ್ಯ ವಲಯದ ಕಂಚನಳ್ಳಿಯಲ್ಲಿ ನಡೆದಿದೆ.
ಕೋಳಿಕೇರಿ ಗ್ರಾಮದ ದೇಶಪಾಂಡೆ ನಗರದ ನಿವಾಸಿಗಳಾದ ಸೋನು ಘಾಟು ಕೊಕ್ರೆ 32 ವರ್ಷ ಹಾಗೂ ಲಕ್ಷ್ಮಣ ವಾಗು ಕೊಕ್ಕರೆ 37 ವರ್ಷ ಇಬ್ಬರು ಬೆಳಗ್ಗೆ ಕಂಚನಳ್ಳಿಯ ತಮ್ಮ ಗದ್ದೆಗೆ ದನಕರು ಗಳನ್ನು ಬಿಡಲು ಹೋದಾಗ ಚಿರತೆ ಒಂದು ದಾಳಿ ಮಾಡಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಗಾಯಾಳುಗಳಿಗೆ ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.