ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ತಾಲೂಕಿನ ಸೆಂಟ್ರಲ್ ಜೈಲ್ ಬಳಿಯ ಖಣದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಪಾಣೆಗಾಂವ್ ಗ್ರಾಮದಲ್ಲಿ ಖುಂಖಾರ್ ಚಿರತೆಯ ಹೆಜ್ಜೆಗಳು ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕದ ಮನೆ ಮಾಡಿದೆ.
ಪಾಣೆಗಾಂವ್ ಗ್ರಾಮದಲ್ಲಿ ಆ.೮ರ ರಾತ್ರಿಯಂದು ಚಿರತೆಯೊಂದು ಎತ್ತಿನ ಮೇಲೆ ದಾಳಿ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು,ಪ್ರಾದೇಶಿಕ ಅರಣ್ಯ ವಲಯದ ವಲಯ ಅರಣ್ಯಾಧಿಕಾರಿಗಳು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಇನ್ನೂ ಗ್ರಾಮದಲ್ಲಿ ಚಿರತೆಯ ಹೆಜ್ಜೆಗಳ ಗುರುತು ಕಂಡುಬಂದಿರುವ ಹಿನ್ನೆಲೆ,ಗ್ರಾಮದಾದ್ಯಂತ ಡಂಗೂರ್ ಭಾರಿಸುವ ಮೂಲಕ ಎಚ್ಚರದಿಂದ ಇರುವಂತೆ ಹಾಗೂ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ರಾತ್ರಿ ಹೊತ್ತಿನಲ್ಲಿ ಒಬ್ಬೊಬ್ಬರಾಗಿ ತಿರುಗಾಟ, ಹೊಲಗಳಿಗೆ ಹೋಗದಂತೆ ಸೂಚಿಸಲಾಗಿದೆ.