ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಚಿರತೆ ಕಾಣಿಸಿದೆ ಎಂದು ಸ್ಥಳೀಯರು ದೂರಿದ್ದು, ಅರಣ್ಯಾಧಿಕಾರಿಗಳು ಚಿರತೆ ಶೋಧ ಆರಂಭಿಸಿದ್ದರು.
ಇದೀಗ ಶೋಧ ಕಾರ್ಯಾಚರಣೆ ಮುಗಿದಿದ್ದು, ನಿವಾಸಿಗಳು ಹೇಳಿದ ಸ್ಥಳದಲ್ಲಿ ಚಿರತೆಯಲ್ಲ ನಾಯಿ ಪತ್ತೆಯಾಗಿದೆ!
ಹೌದು, ಇದರಿಂದ ಬೇಸತ್ತ ಅಧಿಕಾರಿಗಳು ನಾಯಿ ಹುಡುಕಿದ್ದೇವೆ, ನಾಯಿ ಮಾಲೀಕನನ್ನೂ ಹುಡುಕಿ ಕೊಡಬೇಕಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಆರ್‌ಆರ್ ನಗರ ನಿವಾಸಿಗಳು ಹಲವು ಬಾರಿ ಕರೆ ಮಾಡಿ ಚಿರತೆ ಕಂಡಿರುವ ಬಗ್ಗೆ ದೂರಿದ್ದರು. ಸಿಸಿಟಿವಿಯಲ್ಲಿ ಪ್ರಾಣಿಯೊಂದು ನಡೆದುಕೊಂಡು ಹೋಗಿದ್ದು, ಕ್ಲಿಯರ್ ಇಲ್ಲದ ಕಾರಣ ಅದನ್ನು ಚಿರತೆ ಎಂದು ಭಾವಿಸಿದ್ದರು. ಆದರೆ ನಿವಾಸಿಗಳು ಹೇಳಿದ ಸ್ಥಳ ಪರಿಶೀಲನೆ ಮಾಡಿದಾಗ ನಾಯಿ ಪತ್ತೆಯಾಗಿದೆ.