January22, 2026
Thursday, January 22, 2026
spot_img

ನರಸಾಪೂರದ ಖಾದಿ ನಗರದಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ಸಾರ್ವಜನಿಕರು

ಹೊಸದಿಗಂತ ವರದಿ ಗದಗ:

ತಾಲೂಕಿನ ನರಸಾಪೂರ ಗ್ರಾಮದ ಖಾದಿ ನಗರದ ವರಸಿದ್ಧಿ ವಿನಾಯಕ ದೇವಸ್ಥಾನದ ಬಳಿ ಶನಿವಾರ ಬೆಳಿಗ್ಗೆ ಚಿರತೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.

ವರಸಿದ್ಧಿ ವಿನಾಯಕ ದೇವಸ್ಥಾನದ ಸಮುದಾಯ ಭವನದಲ್ಲಿರುವ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಅಯ್ಯಪ್ಪ ಮಾಲಾಧಾರಿಗಳು ನಸುಕಿನ ಜಾವ ಪೂಜಾ ವಿಧಾನದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಭಯದಲ್ಲಿ ಎದ್ದು-ಬಿದ್ದು ಓಡುತ್ತ, ಗಾಯ ಮಾಡಿಕೊಂಡಿದ್ದಾರೆ.

ಇದಕ್ಕೂ ಎರಡು ದಿನಗಳ ಮುನ್ನ ಗದಗ ಎಪಿಎಂಸಿ ಯಾರ್ಡ್ ಮತ್ತು ಪಂಚಾಕ್ಷರಿ ಬಡಾವಣೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದರಿಂದ ಅಲ್ಲಿನ ನಿವಾಸಿಗಳೂ ತೀವ್ರ ಆತಂಕಕ್ಕೊಳಗಾಗಿದ್ದಾರೆ.

ತುರ್ತು ಕ್ರಮಕ್ಕೆ ಆಗ್ರಹ
​ನಗರದಲ್ಲಿ ಹೆಚ್ಚಿರುವ ಈ ಆತಂಕದ ಹಿನ್ನೆಲೆಯಲ್ಲಿ, ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತುರ್ತು ಕ್ರಮಗಳನ್ನು ಕೈಗೊಂಡು ಚಿರತೆಯನ್ನು ಪತ್ತೆಹಚ್ಚಿ ಸೆರೆಹಿಡಿಯಬೇಕು ಎಂದು ಖಾದಿ ನಗರದ ನಾಗರಿಕರು
ಆಗ್ರಹಿಸಿದ್ದಾರೆ.

Must Read