ಹೊಸದಿಗಂತ ವರದಿ ಕಲಬುರಗಿ:
ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರ ನೀಡುವಂತಹ ರಾಷ್ಟ್ರೋನ್ನತಿಯ ಕೆಲಸವನ್ನು ರಾಷ್ಟ್ರೋತ್ತಾನ ಪರಿಷತ್ ನಿರಂತರವಾಗಿ ಮಾಡುತ್ತಾ ಬರುತ್ತಿದ್ದು,ನಮ್ಮ ಭಾರತದ ಮೂಲ ಪರಂಪರೆಯನ್ನು ಇಂದಿನ ಮಕ್ಕಳಲ್ಲಿ ಬೆಳೆಸುವ ಅವಶ್ಯಕತೆಯಿದೆ ಎಂದು ವಿಶ್ವ ಹಿಂದೂ ಪರಿಷತ್,ನ ಕೇಂದ್ರೀಯ ಸಹಕಾಯ೯ದಶಿ೯ ಅಯೋಧ್ಯೆ ಶ್ರೀಯುತ ಗೋಪಾಲ್ ಜೀ ಹೇಳಿದರು.
ಭಾನುವಾರ ನಗರದ ಹೊರವಲಯದ ಶರಣಸಿರಸಗಿ ಬಳಿಯ ರಾಷ್ಟ್ರೋತ್ತಾನ ವಿದ್ಯಾಕೇಂದ್ರ ಕಲಬುರಗಿ ಕಟ್ಟಡದ ವಾಸ್ತುಪುಜೆ ಹಾಗೂ ಲೋಕಾಪ೯ಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡದ ವ್ಯಾಮೋಹ ಸೊರಗಲು ಮೂಲ ಕಾರಣ,ಇಂಗ್ಲಿಷ್ ವ್ಯಾಮೋಹ.ಹೀಗಾಗಿ ಸಂಸ್ಕಾರಯುತವಾದ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕೃತಿ,ಪರಂಪರೆಯ ಅರಿವು ನಮ್ಮ ಮಕ್ಕಳಿಗೆ ನೀಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ರಾಷ್ಟ್ರೋತ್ತಾನ ಶಾಲೆಯನ್ನು ಆರಂಭಿಸುವ ಬಹುದಿನದ ಕನಸು ಇಂದು ಇಡೇರಿದೆ.ಇಲ್ಲಿ ಶಾಲೆಗಳ ಕೊರತೆಯಿಲ್ಲ.ಬದಲಾಗಿ ಸಂಸ್ಕಾರ ನೀಡುವಂತಹ ಶಾಲೆಗಳ ಕೊರತೆಯಿದ್ದು,ಜಿಲ್ಲೆಯ ಪ್ರತಿ ಗ್ರಾಮಗಳ ಮಕ್ಕಳು ವಿದ್ಯಾಭ್ಯಾಸ ಪಡೆಯುವ ಕನಸು ಪರಿಷತ್ ಹೊಂದಿದ್ದು,ಉತ್ತಮವಾದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಶಾಲೆ ಪ್ರಾರಂಭಿಸಲಾಗಿದೆ ಎಂದರು.
ಜ್ಞಾನ,ವಿವೇಕ,ರಾಷ್ಟ್ರದ ಪರಂಪರೆಯ ಅರಿವು ತಿಳಿಸುವುದು ಪ್ರತಿಯೊಂದು ಶಾಲೆಯ ಮುಖ್ಯ ಗುರಿಯಾಗಿರಬೇಕು.ಮಕ್ಕಳು ಚಿಕ್ಕವರಿದ್ದಾಗಲೇ ಅವರಿಗೆ ಸಂಸ್ಕಾರ ಭರಿತ ಶಿಕ್ಷಣ ನೀಡುವದರ ಮೂಲಕ ಈ ರಾಷ್ಟ್ರಕ್ಕೆ ಒಬ್ಬ ಒಳ್ಳೆಯ ಪ್ರಜೆ ನೀಡುವಂತಾಗಬೇಕು.ಎಲ್ಲಾ ಶಾಲೆಗಳ ಮಾದರಿಯಲ್ಲೆ ನಮ್ಮ ಶಾಲೆಯಾಗಬಾರದು.ಬದಲಾಗಿ ಎಲ್ಲಾ ಶಾಲೆಗಳು ರಾಷ್ಟ್ರೋನ್ನತಿಯನ್ನು ಮೂಲ ಗುರಿಯಾಗಿಸಿಕೊಂಡು ಮುಂದೆ ಬರಬೇಕು ಎಂದರು.
ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟಾಗ ಮಾತ್ರ,ಒಳ್ಳೆಯ ಮಕ್ಕಳು, ಒಳ್ಳೆಯ ರಾಷ್ಟ್ರ ನಿಮಾ೯ಣವಾಗಲು ಸಾಧ್ಯವಿದೆ. ಪರಸ್ತ್ರೀಯರನ್ನು ಗೌರವಿಸುವುದು ಒಬ್ಬ ಸಂಸ್ಕಾರಯುತ ವ್ಯಕ್ತಿಯಿಂದ ಮಾತ್ರ ಸಾಧ್ಯವಾಗಿದ್ದು,ನಾವೆಲ್ಲರೂ ಒಂದೇ ಎಂಬ ಭಾವವನ್ನು ನಾವು ಅರಿಯಬೇಕಾಗಿದೆ.ಈ ನಿಟ್ಟಿನಲ್ಲಿ ರಾಷ್ಟ್ರೋತ್ತಾನ ಪರಿಷತ್ ಆ ಭಾವವನ್ನು ಬೆಳೆಸುವ ಕಾಯ೯ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕನಾ೯ಟಕ ಉತ್ತರ ಪ್ರಾಂತದ ಸಂಘಚಾಲಕರಾದ ಖಗೇಶನ್ ಪಟ್ಟಣಶೆಟ್ಟಿ, ಸಹ ಸಂಘಚಾಲಕರಾದ ಅರವಿಂದರಾವ್ ದೇಶಪಾಂಡೆ, ಪ್ರಾಂತದ ಬೌದ್ಧಿಕ ಪ್ರಮುಖರಾದ ಕೃಷ್ಣ ಜೋಶಿ, ರಾಷ್ಟ್ರೋತ್ತಾನ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗಡೆ, ರಾಷ್ಟ್ರೋತ್ತಾನ ಆಡಳಿತ ಮಂಡಳಿ ಸದಸ್ಯ ರವಿಕುಮಾರ್ ಜೀ, ಸಂಯೋಜಕರಾದ ಮಹೇಶ್ವರಯ್ಯಾ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.