ಇಸ್ರೇಲ್‌ ದಾಳಿ ನಿಲ್ಲಿಸಲು ಭಾರತ ತನ್ನ ಸಾಮರ್ಥ್ಯ ಬಳಸಲಿ: ಪ್ರಧಾನಿ ಮೋದಿಗೆ ಕರೆ ಮಾಡಿದ ಇರಾನ್‌ ಅಧ್ಯಕ್ಷ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಸ್ರೇಲ್‌ (Israel) ದಾಳಿಗಳನ್ನು ಕೊನೆಗೊಳಿಸಲು ಭಾರತ ತನ್ನ ಎಲ್ಲಾ ಸಾಮರ್ಥ್ಯಗಳನ್ನು ಬಳಸಬೇಕು ಎಂದು ಪ್ರಧಾನಿ ಮೋದಿಗೆ (Narendra Modi) ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಕರೆ ಮಾಡಿ ಒತ್ತಾಯಿಸಿದ್ದಾರೆ.

ಜೊತೆಗೆ ಮಾತುಕತೆ ವೇಳೆ ಇರಾನ್‌ (Iran) ಅಧ್ಯಕ್ಷ, ಪಾಶ್ಚಿಮಾತ್ಯ ವಸಾಹತುಶಾಹಿ ವಿರುದ್ಧ ಭಾರತದ ಹೋರಾಟಗಳು ಹಾಗೂ ವಿಶ್ವದ ಅಲಿಪ್ತ ಚಳವಳಿಯ ಸಂಸ್ಥಾಪಕರ ದೇಶವಾದ ಭಾರತದ ಸ್ಥಾನವನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓ

ಗಾಜಾದ ತುಳಿತಕ್ಕೊಳಗಾದ ಜನರ ವಿರುದ್ಧ ಜಿಯೋನಿಸ್ಟ್‌ ಅಪರಾಧಗಳನ್ನು ಕೊನೆಗೊಳಿಸಲು ಭಾರತವು ತನ್ನೆಲ್ಲಾ ಸಾಮರ್ಥ್ಯ ಬಳಸುವ ನಿರೀಕ್ಷೆ ಇದೆ.ತಕ್ಷಣದ ಕದನ ವಿರಾಮ ಘೋಷಣೆ ಹಾಗೂ ಗಾಜಾದಲ್ಲಿನ ಸಂತ್ರಸ್ತ ಜನರಿಗೆ ನೆರವು ಒದಗಿಸುವುದು ಮತ್ತು ತಡೆ ತೆರವುಗೊಳಿಸುವ ಯಾವುದೇ ಜಾಗತಿಕ ಜಂಟಿ ಪ್ರಯತ್ನವನ್ನು ಟೆಹರಾನ್ ಬೆಂಬಲಿಸಲಿದೆ ಎಂದು ಇರಾನ್ ಅಧ್ಯಕ್ಷ ರೈಸಿ ಹೇಳಿದ್ದಾರೆ.

ಪ್ಯಾಲೆಸ್ತೀನ್‌ ಜನರ ಹತ್ಯೆಯು ಪ್ರಪಂಚವನ್ನು ಕೆರಳಿಸಿದೆ. ಅಮಾಯಕ ಮಹಿಳೆಯರು ಮತ್ತು ಮಕ್ಕಳ ಹತ್ಯೆ, ಆಸ್ಪತ್ರೆಗಳು, ಶಾಲೆಗಳು, ಮಸೀದಿಗಳು, ಚರ್ಚ್‌ಗಳು ಮತ್ತು ವಸತಿ ಪ್ರದೇಶಗಳ ಮೇಲಿನ ದಾಳಿಗಳು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಸ್ರೇಲ್ ಆಡಳಿತದ ದುರಾಕ್ರಮಣವನ್ನು ಎದುರಿಸಲು ಪ್ಯಾಲೆಸ್ತೀನ್‌ನ ಪ್ರತಿರೋಧ ಗುಂಪುಗಳಿಗೆ ಎಲ್ಲಾ ಕಾನೂನಾತ್ಮಕ ಹಕ್ಕು ಇದೆ. ಶೋಷಣೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿರುವ ಪ್ಯಾಲೆಸ್ತೀನಿ ಜನರನ್ನು ಎಲ್ಲಾ ದೇಶಗಳೂ ಬೆಂಬಲಿಸಬೇಕು ಎಂದು ರೈಸಿ ಒತ್ತಾಯಿಸಿದ್ದಾರೆ.

ಮಾತುಕತೆಯ ಮತ್ತೊಂದು ಭಾಗದಲ್ಲಿ, ಭಾರತದ ಜತೆಗಿನ ಸಂಬಂಧದ ದೃಷ್ಟಿಕೋನವು ‘ವ್ಯೂಹಾತ್ಮಕ’ವಾಗಿದೆ ಹಾಗೂ ಸಹಕಾರದ ಅಭಿವೃದ್ಧಿಯ ಯೋಜನೆಗಳು ಮತ್ತು ಈ ಕ್ಷೇತ್ರದಲ್ಲಿನ ವಿಳಂಬವನ್ನು ಸರಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಉತ್ತರ- ದಕ್ಷಿಣ ಕಾರಿಡಾರ್‌ನ ಮಹತ್ವದ ಹಾಗೂ ಈ ಭಾಗದ ಎಲ್ಲಾ ದೇಶಗಳಿಗೂ ಅದರ ಪ್ರಯೋಜನದ ಬಗ್ಗೆ ಪ್ರತಿಪಾದಿಸಿದ ಅವರು, ಛಬಹಾರ್ ಬಂದರು ಸೇರಿದಂತೆ ಸುಸ್ಥಿರ ಆರ್ಥಿಕ ಸಹಕಾರವನ್ನು ಬಲಪಡಿಸಲು ಭಾರತವಯ ‘ಗಂಭೀರ ಹೂಡಿಕೆ’ಗಳನ್ನು ಮಾಡುವ ನಿರೀಕ್ಷೆ ಇದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!