ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಳ್ಳಾರಿ ಜೈಲಿನ ಬಳಿ ಬೆಂಗಳೂರಿನ ಕೆಂಗೇರಿ ಬಳಿಯ ಅವರ ಅಭಿಮಾನಿ ಮಹಿಳೆ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಬಂದು ಹೈಡ್ರಾಮಾ ಮಾಡಿರುವ ಘಟನೆ ನಡೆದಿದೆ.
ದರ್ಶನ್ ನೋಡಲು ಜೈಲೊಳಗೆ ಬಿಡಿ, ಅವರ ಕುಟುಂಬ ಸದಸ್ಯರನ್ನು ಮಾತ್ರ ಬಿಡ್ತೀವಿ ಅಂತ ನೀವು ಹೇಳೊದಾದ್ರೆ ಅವರನ್ನು ಮದುವೆಯಾಗಲೂ ರೆಡಿಯಿದ್ದೇನೆ ಬೇಕಿದ್ರೆ ಎಂದು ಮಹಿಳೆ ಹೇಳಿದಾಗ ಪೊಲೀಸರು ತಬ್ಬಿಬ್ಬಾಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದಾಗ ದರ್ಶನ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಲಕ್ಷ್ಮಿಗೆ ದರ್ಶನ್ ನೋಡಲು ಪೊಲೀಸರು ಅವಕಾಶ ಕೊಟ್ಟಿರಲಿಲ್ಲ. ಇದೀಗ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಬಂದಿರುವ ಅಭಿಮಾನಿ ಲಕ್ಷ್ಮೀ, ನಾನು ದರ್ಶನ್ ರನ್ನ ನೋಡಬೇಕು ಎಂದು ಜೈಲು ಸಿಬ್ಬಂದಿ ಜೊತೆ ವರಾತ ತೆಗೆದಿದ್ದಾಳೆ.
ಮನೆಯವರಿಗೆ ಮಾತ್ರ ಬಿಡೋದಾದರೆ ನಾನು ದರ್ಶನ್‌ರನ್ನ ಮದುವೆಯಾಗುತ್ತೇನೆ ಎಂದ ಮಹಿಳೆ. ನನಗೆ ದರ್ಶನ್ ಇಷ್ಟ, ವಿಜಯಲಕ್ಷ್ಮೀ ರೀತಿಯಲ್ಲಿ ನಾನು ಮದುವೆಯಾಗುತ್ತೇನೆ. ಒಳಗೆ ಬಿಡಿ ನಾನು ದರ್ಶನ್ ನೋಡಲೇಬೇಕು. ಬೆಂಗಳೂರು ಜೈಲಿಗೆ ಹೋದ್ರೆ ಅಲ್ಲೂ ಬಿಡ್ಲಿಲ್ಲ. ಬಳ್ಳಾರಿಗೆ ಬಂದ್ರೆ ಇಲ್ಲೂ ಬಿಡಲ್ಲ ಅಂದ್ರೆ ಹೇಗೆ? ಎಂದು ಜೈಲು ಸಿಬ್ಬಂದಿಯನ್ನು ಪ್ರಶ್ನಿಸಿದ್ದಾಳೆ.
ನಾನಿವತ್ತು ದರ್ಶನ್‌ರನ್ನ ನೋಡಲೇಬೇಕು. ಹಣ್ಣು, ತಿಂಡಿ ಕೊಟ್ಟು ಮಾತಾಡಿಸಿಕೊಂಡು ಹೋಗುತ್ತೇನೆ ನನ್ನನ್ನು ಜೈಲೊಳಗೆ ಬಿಡಿ ಎಂದು ಜೈಲು ಮುಂಭಾಗ ಪಟ್ಟು ಹಿಡಿದು ಕುಳಿತಿದ್ದಾಳೆ.