ಹಸುವನ್ನು ನೋಡಿಕೊಳ್ಳೋದು, ಹಾಲು ಕರಿಯೋದು, ಅದನ್ನು ಮಾರೋದು ಅವಳ ನಿತ್ಯದ ಕೆಲಸವಾಗಿತ್ತು. ನಿತ್ಯವೂ ಒಂದೇ ಕೆಲಸ ಮಾಡಿ ಮಾಡಿ ಬೇಜಾರಾಗಿದ್ರೂ ಹಾಲು ಮಾರಿದ ಹಣದಲ್ಲಿ ಏನೇನೆಲ್ಲಾ ಮಾಡ್ಬೋದು ಅನ್ನೋದನ್ನ ಯೋಚಿಸಿ ಆಕೆ ಸುಮ್ಮನಾಗ್ತಿದ್ಲು.
ಒಂದು ದಿನ ಹಾಲು ಕರೆದು ದೊಡ್ಡ ಗಡಿಗೆಯಲ್ಲಿ ಹಾಕಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗ್ತಾ ಇದ್ಲು. ರಸ್ತೆಯಲ್ಲಿ ಕೋಳಿ ಮಾರಾಟವನ್ನು ನೋಡಿದ್ಲು. ಅದನ್ನು ನೋಡಿ ಇವತ್ತು ಹಾಲು ಮಾರಿದ ಹಣದಿಂದ ಒಂದು ಕೋಳಿ ಖರೀದಿ ಮಾಡ್ಬೇಕು. ನಂತರ ಅದರ ಮೊಟ್ಟೆಗಳನ್ನು ಮಾರಾಟ ಮಾಡ್ತಾ ದುಡ್ಡು ಮಾಡಬಹುದು ಎಂದು ಯೋಚನೆ ಮಾಡಿದ್ಲು.
ಕೋಳಿಯ ಮೊಟ್ಟೆ ಮಾರಾಟದಿಂದ ಎಷ್ಟೊಂದು ಹಣ ಸಂಪಾದಿಸಬಹುದು, ಅದರಿಂದ ನಾನು ಹೊಸ ಬಟ್ಟೆ ತೆಗೆದುಕೊಳ್ಳಬಹುದು. ನಾನು ಹೊಸ ಬಟ್ಟೆ ಹಾಕ್ಕೊಂಡು ಓಡಾಡ್ತಾ ಇದ್ರೆ ನನ್ನ ಅಕ್ಕಪಕ್ಕದ ಜನ ನನ್ನನ್ನು ನೋಡಿ ಹೊಟ್ಟೆ ಉರ್ಕೋತಾರೆ, ಎಷ್ಟು ಮಜ ಅಲ್ವಾ ಅಂತ ಯೋಚಿಸ್ತಾ ಇದ್ಲು.
ಅತಿಯಾದ ಎಕ್ಸೈಟ್‌ಮೆಂಟ್‌ನಿಂದ ರಸ್ತೆಯಲ್ಲಿದ್ದ ಗುಂಡಿ ಕಾಣದೇ ಎಡವಿ ಬಿದ್ದಳು! ಗಡಿಯಲ್ಲಿದ್ದ ಹಾಲೆಲ್ಲ ಮಣ್ಣುಪಾಲಾಯ್ತು!!
ಹಗಲುಗನಸು ಕಾಣೋದು ಉತ್ತಮ ಆಯ್ಕೆ ಅಲ್ಲ, ಕೆಲಸ ಮುಗಿವ ಮುನ್ನವೇ ಅತಿಯಾಸೆ ಪಡೋ ಬದಲು, ಶ್ರಮಪಟ್ಟು ಕೆಲಸ ಮಾಡೋದು ಬೆಸ್ಟ್ ಅಲ್ವಾ?

