ಒಮ್ಮೆ ಗಂಡ ಹೆಂಡತಿ ಇಬ್ಬರು ಒಂದು ಸಣ್ಣ ವಿಷ್ಯಕ್ಕೆ ಸಿಕ್ಕಾಪಟ್ಟೆ ಜಗಳ ಮಾಡ್ತಿದ್ರು. ಜಗಳ ಕೊನೆಗೆ ಇಬ್ಬರು ಮಾತು ಮುರಿಯುವಲ್ಲಿಗೆ ತಲುಪಿತ್ತು. ಇಬ್ಬರು ಕೂಡ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ರು. ಅದಕ್ಕೆ ಕಾರಣ ಅವರಿಬ್ಬರ ego. ಒಮ್ಮೆ ಹುಡುಗನ ಅಪ್ಪ ಅವರಿಬ್ಬರನ್ನ ಮಾತನಾಡಿಸಿ ಬರೋಣ ಅಂತ ಮನೆಗೆ ಬರ್ತಾರೆ ಆಗ ಅಪ್ಪನಿಗೆ ಈ ವಿಷ್ಯ ಗೊತ್ತಾಗುತ್ತೆ.
ಅಪ್ಪ ಇಬ್ಬರನ್ನು ಕೂರಿಸಿ ಒಂದು ಕಥೆ ಹೇಳ್ತಾರೆ. ‘ಒಮ್ಮೆ ನಮ್ಮ ಎಲ್ಲಾ ಫೀಲಿಂಗ್ಸ್ ಗಳು ಒಂದು ಸುಂದರವಾದ ದ್ವೀಪದಲ್ಲಿ ಒಂದೇ ಕಡೆ ವಾಸ ಮಾಡ್ತಿದ್ರಂತೆ. ಒಮ್ಮೆ ದೊಡ್ಡ ಸುನಾಮಿ ಬಂದು ಆ ದ್ವೀಪವೇ ಮುಳುಗಿ ಹೋಯಿತಂತೆ ಎಲ್ಲಾ ಫೀಲಿಂಗ್ಸ್ ಗಳು ಭಯದಲ್ಲೇ ಇದ್ವಂತೆ. ಆಗ ಪ್ರೀತಿ ಅನ್ನೋ ಫೀಲಿಂಗ್ಸ್ ಭಯ ಪಡದೆ ಒಂದು ದೋಣಿ ಮಾಡಿ ಹೊರಡೋಕೆ ರೆಡಿಯಾಯ್ತು. ಇದನ್ನ ನೋಡಿ ಉಳಿದ ಫೀಲಿಂಗ್ಸ್ ಗಳು ದೋಣಿ ಹತ್ತಿ ಪ್ರೀತಿಯ ಜೊತೆ ಹೋಗೋಕೆ ತಯಾರಾಗ್ತವೆ. ಆದ್ರೆ ego ಮಾತ್ರ ದೋಣಿ ಹತ್ತೋದೇ ಇಲ್ಲ.
ಪ್ರೀತಿ ಫೀಲಿಂಗ್ಸ್ ತುಂಬಾನೇ ಟ್ರೈ ಮಾಡುತ್ತೆ egoನಾ ಕರೀಲಿಕೆ ಆದ್ರೆ ಅದು ಬರೋದೇ ಇಲ್ಲ ಅಂತ ಅಲ್ಲೇ ಕೂತುಬಿಡುತ್ತೆ. ಪ್ರೀತಿಗೆ egoನಾ ಬಿಟ್ಟು ಬರೋಕೆ ಮನಸ್ಸೇ ಇರೋದಿಲ್ಲ. ಇದನ್ನ ನೋಡಿ ಬಾಕಿ ಫೀಲಿಂಗ್ಸ್ ಗಳು ದೋಣಿಯಲ್ಲಿ ಹೊರಟು ಬಿಡುತ್ತೆ. ಆದ್ರೆ ಇಲ್ಲಿ egoನಾ ಹಠದಿಂದ ಪ್ರೀತಿ, ego ಇಬ್ಬರು ಕೂಡ ಸತ್ತು ಹೋಗ್ತಾರೆ.
ಈ ಕಥೆಯಲ್ಲಿ ನಾವು ತಿಳ್ಕೊಳೋದು ಏನು ಅಂದ್ರೆ ತುಂಬಾನೇ ಸಿಂಪಲ್ ‘ಎಲ್ಲಿ ego ಇರುತ್ತೋ ಅಲ್ಲಿ ಪ್ರೀತಿ ಇರೋಕೆ ಸಾಧ್ಯ ಇಲ್ಲ.’ ‘ಪ್ರೀತಿ ಸತ್ತೋಗುತ್ತೆ ego ನಿಂದ ಅಲ್ಲ್ವಾ?’

