ಹೊರಗಡೆ ಜೋರು ಮಳೆ ಬರ್ತಿತ್ತು, ಸಣ್ಣ ಹುಡುಗ ಕೈಯಲ್ಲಿ ಪುಟ್ಟ ಕಾಗದದ ದೋಣಿ ಹಿಡಿದುಕೊಂಡು ಮನೆಮುಂದೆ ಹರಿಯುತ್ತಿದ್ದ ನೀರಿನ ಸಣ್ಣ ತೋಡಿನ ಬಳಿ ಬಂದು ಕೈಯಲ್ಲಿರೋ ದೋಣಿಯನ್ನು ಆ ನೀರಿನಲ್ಲಿ ಬಿಡೋಕೆ ಟ್ರೈ ಮಾಡ್ತಿದ್ದ. ಎಷ್ಟು ಸಲ ಹೇಗೆ ಮಾಡಿದ್ರು ದೋಣಿ ಮುಳುಗಿ ಬಿಡ್ತಿತ್ತು.
ಆಗ ದಾರಿಹೋಕನೊಬ್ಬ ಕೇಳುತ್ತಾನೆ ‘ನೀನು ಯಾಕೆ ಹೊಸ ದೋಣಿ ಮಾಡಿ ಮತ್ತೆ ಮತ್ತೆ ಬಿಡ್ತಿದ್ದೀಯ? ಅದು ಮುಳುಗುತ್ತೆ ಅಂತ ಗೊತ್ತಲ್ವಾ ನಿನಗೆ’ ಅಂತ ಕೇಳ್ತಾರೆ.
ಆಗ ಆ ಹುಡುಗ ಹೇಳ್ತಾನೆ ‘ಅಂಕಲ್ ನಾನು ಇಲ್ಲಿ ಬಂದಿರೋದು ದೋಣಿ ಪರ್ಫೆಕ್ಟ್ ಆಗಿ ಮುಂದೆ ಹೋಗ್ಲಿ ಅಂತಲ್ಲ, ನಾನು ಇಲ್ಲಿ ಬಂದಿರೋದು ಹೊಸತನ್ನು ಕಲಿಯೋಕೆ. ಈ ಮುಳುಗುವ ದೋಣಿ ಪ್ರತೀಸಲನು ಹೊಸ ಪಾಠ ಹೇಳಿಕೊಡುತ್ತೆ. ಅಂತ ಹೇಳಿ ತನ್ನ ಕೊನೆಯ ಪ್ರಯತ್ನ ಅಂತ ಕೈಯಲ್ಲಿರೋ ಲಾಸ್ಟ ದೋಣಿನ ನೀರಲ್ಲಿ ಬಿಡ್ತಾನೆ. ಈ ಸಲ ಆ ದೋಣಿ ತೇಲಿಕೊಂಡು ಮುಂದೆ ಹೋಗುತ್ತೆ.
ಈ ಕಥೆಯಿಂದ ನಾವು ತಿಳ್ಕೊಳೋದು ಏನು ಅಂದ್ರೆ ಜೀವನದಲ್ಲಿ ಫೇಲ್ಯೂರ್ ಬರೋದು ನಮನ್ನ ಗಟ್ಟಿ ಮಾಡೋದಕ್ಕೆ ಹೊಸತನ್ನು ಕಲಿಸೋದಕ್ಕೆ, ಮತ್ತೊಮ್ಮೆ ಆ ಕೆಲಸ ಮಾಡುವಾಗ ಹಳೆ ತಪ್ಪಿನಿಂದ ಕಲಿಯೋದಕ್ಕೆ.

