ಇನ್ನೊಬ್ಬರ ಬದುಕನ್ನು ಹಾಳು ಮಾಡೋರಿಗೆ ತಾಯಿ ಚಾಮುಂಡಿ ಸದ್ಬುದ್ಧಿ ನೀಡಲಿ: ಸಿಎಂ ಸಿದ್ದು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೊಬ್ಬರ ಬದುಕನ್ನು ಹಾಳು ಮಾಡಲು ಯತ್ನಿಸುವವರಿಗೆ ಸದ್ಬುದ್ಧಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುತ್ತೂರು ಶಾಖಾ ಮಠಕ್ಕೆ ಸಿಎಂ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದರ್ಭದಲ್ಲಿ ವಿಜಯದಶಮಿ ಹಬ್ಬವು ದುಷ್ಟರನ್ನು ಸಂಹರಿಸಿ ಒಳ್ಳೆಯವರನ್ನು ರಕ್ಷಿಸುವ ಹಬ್ಬವಾಗಿದೆ. ನಾಡಿನಾದ್ಯಂತ ವಿಜಯದಶಮಿಯಂದು ಜನತೆಗೆ ಶುಭ ಹಾರೈಸಿದ್ದಾರೆ.

ಈ ಬಾರಿ ಚೆನ್ನಾಗಿ ಮಳೆ ಬೆಳೆ ಆಗಿದೆ. ರೈತರ ಮುಖದಲ್ಲಿ ಸಂಭ್ರಮ ಕಾಣುತ್ತಿದೆ. ರೈತರಿಗೆ ಉತ್ತಮವಾಗಿ ಮಳೆ ಬಂದ್ರೆ ಅದಕ್ಕಿಂತ ಸಂತೋಷ ಬೇರಿಲ್ಲ. ಕಳೆದ ವರ್ಷ ಬರಗಾಲ ಇತ್ತು ಈ ವರ್ಷ ಎಲ್ಲಾ ಜಲಾಶಯ ಭರ್ತಿ ಆಗಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!