ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕಾಂಗ್ರೆಸ್ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ತೀವ್ರ ವಾಗ್ದಾಳಿ ನಡೆಸಿದ್ದು, ಆಧಾರರಹಿತವಾಗಿ ಶಾಪ ಹಾಕುವುದು ಅವರ ಅಜೆಂಡಾ ಎಂದು ಹೇಳಿದ್ದಾರೆ.
“ಪ್ರಧಾನಿ ಮೋದಿಯನ್ನು ಅನಗತ್ಯವಾಗಿ ಶಪಿಸುವುದು ರಾಹುಲ್ ಗಾಂಧಿಯವರ ಒಂದು ಪಾಯಿಂಟ್ ಅಜೆಂಡಾ, ಅವರು ಬೆಳಿಗ್ಗೆ ಎದ್ದ ತಕ್ಷಣ ಪ್ರಧಾನಿಯನ್ನು ಟೀಕಿಸಲು ಪ್ರಾರಂಭಿಸುತ್ತಾರೆ” ಎಂದು ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.
“ಸತ್ಯವೆಂದರೆ, ಅವರಿಗೆ ಭಾರತದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಏನೂ ತಿಳಿದಿಲ್ಲ. ಅವರು ವಿದೇಶಿ ಸಂಸ್ಕೃತಿಯಲ್ಲಿ ಬೆಳೆದಿದ್ದಾರೆ. ರಾಹುಲ್ ಮೊದಲು ಭಾರತದ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ನಂತರ ಪ್ರಧಾನಿ ಮೋದಿ ಬಗ್ಗೆ ಮಾತನಾಡಬೇಕು” ಎಂದು ಅವರು ಮತ್ತಷ್ಟು ಕಟುವಾಗಿ ಟೀಕಿಸಿದರು.