ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ವಿರುದ್ಧ ಎಲ್ಲೆಡೆ ಆಕ್ರೋಶವ್ಯಕ್ತವಾಗುತ್ತಿದ್ದು, ಬೇಷರಮ್ ಹಾಡಿನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಡೆಗೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದೆ.
ಇದೀಗ ಮಧ್ಯಪ್ರದೇಶದ ಸ್ಪೀಕರ್ ಗಿರೀಶ್ ಗೌತಮ್ ಕೂಡ ಈ ಹಾಡಿಗೆ ವಿರೋಧ ವ್ಯಕ್ತಪಡಿಸಿದ್ದು, ಅದೊಂದು ಅಸಹ್ಯಕರ ಬೆಳವಣಿಗೆ. ಅಲ್ಲಿ ಅಶ್ಲೀಲತೆ ಇರದೇ ಇದ್ದರೆ, ಶಾರುಖ್ ಖಾನ್ ತನ್ನದೇ ಮಗಳ ಜೊತೆ ಕೂತುಕೊಂಡು ಸಿನಿಮಾ ನೋಡಲಿ. ಮಗಳ ಪ್ರತಿಕ್ರಿಯೆ ಕೇಳಲಿ ಎಂದು ಹರಿಹಾಯ್ದಿದ್ದಾರೆ.
ಅಭಿವ್ಯಕ್ತಿ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಕಲ್ಪನೆ ಇದ್ದರೆ ಅದು ತಪ್ಪು. ಪಠಾಣ್ ವಿಷಯದಲ್ಲಿ ಒಪ್ಪುವುದಕ್ಕೆ ಸಾಧ್ಯವೇ ಇಲ್ಲ ಎಂದಿರುವ ಅವರು, ಮಗಳ ಜೊತೆ ಶಾರುಖ್ ಸಿನಿಮಾ ನೋಡಿದ ಫೋಟೋವನ್ನು ಅಪ್ ಲೋಡ್ ಮಾಡಿ ಜಗತ್ತಿಗೆ ತೋರಿಸುವಂತೆ ಸಲಹೆ ನೀಡಿದ್ದಾರೆ.
ಸ್ಪೀಕರ್ ಹೇಳಿಕೆ ಇದೀಗ ಭಾರೀ ಚರ್ಚಗೆ ಕಾರಣವಾಗಿದೆ. ಥಿಯೇಟರ್ ಗಳಲ್ಲಿ ಪಠಾಣ್ ಸಿನಿಮಾವನ್ನು ನಿಷೇಧಿಸಬೇಕು ಎನ್ನುವ ಮಾತಿಗೆ ಪರೋಕ್ಷವಾಗಿ ಅವರು ಬೆಂಬಲವನ್ನೂ ಸೂಚಿಸಿದ್ದಾರೆ.