ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅಮೆರಿಕನ್ ಪೋಡ್ಕ್ಯಾಸ್ಟರ್ ಲೆಕ್ಸ್ ಫ್ರೀಡ್ಮ್ಯಾನ್ ಅವರು ಪ್ರಧಾನಿ ಮೋದಿ ಅವರನ್ನು ಮೂರು ಗಂಟೆ ಹದಿನೇಳು ನಿಮಿಷಗಳ ಸುದೀರ್ಘ ಸಂದರ್ಶನ ಮಾಡಿದ್ದಾರೆ.
ಈ ಒಂದು ಸಂದರ್ಶನಕ್ಕಾಗಿ ಲೆಕ್ಸ್ ಫ್ರೀಡ್ಮ್ಯಾನ್ ಸುಮಾರು 45 ಗಂಟೆಗಳು ಅಂದರೆ ಎರಡು ದಿನ ಕೇವಲ ನೀರು ಸೇವಿಸುವುದರ ಮೂಲಕ ಉಪವಾಸ ಮಾಡಿರುವುದಾಗಿ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಅವರ ಅಚ್ಚರಿಗೂ ಕಾರಣವಾಗಿದೆ. ನೀವು ನನ್ನ ಮೇಲಿನ ಗೌರವಾರ್ಥವಾಗಿ ಉಪವಾಸ ಮಾಡುತ್ತಿದ್ದೀರಿ ಅನಿಸುತ್ತದೆ ಎಂದು ಮೋದಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಉಪವಾಸದ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇಂದ್ರಿಯಗಳನ್ನು ಚುರುಕುಗೊಳಿಸುವುದು, ಮಾನಸಿಕ ಸ್ಥಿರತೆ ಹೆಚ್ಚಿಸುವುದು ಮತ್ತು ಶಿಸ್ತನ್ನು ಬೆಳೆಸುವಲ್ಲಿ ಬಹಳ ಪ್ರಯೋಜವಾಗಿದೆ. ಉಪವಾಸವು ಕೇವಲ ಆಹಾರವನ್ನು ತ್ಯಜಿಸುವುದಕ್ಕಿಂತ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಸಾಂಪ್ರದಾಯಿಕ ಮತ್ತು ಆಯುರ್ವೇದ ಪದ್ಧತಿಗಳೊಂದಿಗೆ ಆಳವಾಗಿ ಸಂಪರ್ಕ ಹೊಂದಿದೆ ಎಂದು ವಿವರಿಸಿದರು.
ಉಪವಾಸದ ಮೊದಲು ಅವರು ಚೆನ್ನಾಗಿ ಹೈಡ್ರೇಟ್ ಮಾಡುತ್ತಾರೆ. ಆಲಸ್ಯ ಅನುಭವಿಸುವ ಬದಲು, ಉಪವಾಸವು ಅವರನ್ನು ಹೆಚ್ಚು ಶಕ್ತಿಯುತವಾಗಿಸುತ್ತದೆ ಮತ್ತು ಇನ್ನಷ್ಟು ಕಠಿಣ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
ಲೆಕ್ಸ್ ಫ್ರೀಡ್ಮ್ಯಾನ್ ಪೋಡ್ಕ್ಯಾಸ್ಟ್ನಲ್ಲಿ ಪ್ರಧಾನಿ ಮೋದಿ ಅವರು, ತಮ್ಮ ರಾಜಕೀಯ ಜೀವನ, ಗುಜರಾತ್ ಅಭಿವೃದ್ಧಿ, ಗಲಭೆಗಳು ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಬಾಲ್ಯದ ಘಟನೆಗಳನ್ನು ಕೂಡ ಹಂಚಿಕೊಂಡಿದ್ದಾರೆ.