ನಾಗರಿಕರಿಗೆ ಶಾಕ್ ನೀಡಿದ ಕುವೈತ್‌ ಸರ್ಕಾರ : ಪದವಿ ಇಲ್ಲದವರ ಡ್ರೈವಿಂಗ್‌ ಲೈಸೆನ್ಸ್‌ ರದ್ದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

600 ದಿನಾರ್‌ಗಳಿಂದ ಕಡಿಮೆ ಸಂಬಳ ಹೊಂದಿರುವ ಹಾಗೂ ಮಾನ್ಯತೆ ಪಡೆದ ವಿವಿಯಿಂದ ಪದವಿ ಅಥವಾ ಡಿಪ್ಲೊಮಾ ಹೊಂದಿರದ ವಿದೇಶಿ ಚಾಲಕರ ಚಾಲನಾ ಪರವಾನಗಿಯನ್ನು ಹಿಂಪಡೆಯಲು ಕುವೈತ್‌ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ.

ಈ ನಿಯಮ ಜಾರಿಗೆ ಬಂದರೆ ಭಾರತೀಯರು ಸೇರಿ 3 ಲಕ್ಷ ಚಾಲಕರಿಗೆ ಸಂಕಷ್ಟ ಎದುರಾಗಲಿದೆ. ಸಂಚಾರ ದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಕುವೈತ್‌ ಗೃಹ ಸಚಿವಾಲಯ ಹೇಳಿದೆ.

ಸರ್ಕಾರದ ಈ ನಿರ್ಧಾರವು ಅಲ್ಲಿ ವಾಸಿಸುತ್ತಿರುವ ವಿದೇಶಿ ಚಾಲಕರಿಗೆ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಅಲ್ಲದೇ ಟ್ಯಾಕ್ಸಿ ಕಂಪನಿಗಳು ಹಾಗೂ ಮಾಲೀಕರಿಗೂ ತೊಂದರೆ ಎದುರಾಗಲಿದೆ.

ಇದಕ್ಕೆ ನಾನಾ ವಲಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ.
ಸಂಚಾರ ದಟ್ಟಣೆ ತಗ್ಗಿಸಲು ಅನೇಕ ಪರ್ಯಾಯ ಮಾರ್ಗಗಳಿದ್ದು, ನಾನಾ ಕ್ರಮಗಳನ್ನು ಕೈಗೊಳ್ಳಬಹುದು ಎಂದು ನಾಗರಿಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!