ಐಟಿಬಿಪಿ ಯೋಧರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆ ಹೆಗಲು ಕೊಟ್ಟ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್​​ನಲ್ಲಿ ಮಂಗಳವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟ ಐಟಿಬಿಪಿ ಯೋಧರ ಮೃತದೇಹಕ್ಕೆ ಶ್ರೀನಗರದಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ಇತ್ತು. ಈ ವೇಳೆ ಯೋಧರ ಪಾರ್ಥಿವ ಶರೀರವಿದ್ದ ಶವಪೆಟ್ಟಿಗೆ ಹೊತ್ತು ತರುವಾಗ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೆಗಲು ನೀಡಿದ್ದಾರೆ.

ಪಹಲ್ಗಾಮ್​​ನಲ್ಲಿ ನಿಯಂತ್ರಣ ತಪ್ಪಿದ ಬಸ್ ನದಿ ತಳಭಾಗಕ್ಕೆ ಉರುಳಿ ಬಿದ್ದಿದ್ದು 7 ಯೋಧರು ನಿನ್ನೆ ಮೃತಪಟ್ಟಿದ್ದರು.ಗಂಭೀರ ಗಾಯಗೊಂಡ 9 ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಮೇಲೆತ್ತಲಾಗಿದ್ದು ಅವರು ಶ್ರೀನಗರದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಐಟಿಬಿಪಿ ಪ್ರಕಾರ, ಒಟ್ಟು 32 ಗಾಯಾಳುಗಳನ್ನು ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದೆ. 37 ಐಟಿಬಿಪಿ ಸಿಬ್ಬಂದಿ ಮತ್ತು ಇಬ್ಬರು ಜೆ-ಕೆ ಪೊಲೀಸರನ್ನು ಹೊತ್ತ ಬಸ್ ಚಂದನ್ವಾರಿಯಿಂದ ಪಹಲ್ಗಾಮ್‌ಗೆ ತೆರಳುತ್ತಿದ್ದಾಗ ಅದರ ಬ್ರೇಕ್ ಫೇಲ್ ಆಗಿ ಆಳವಾದ ಕಮರಿಗೆ ಉರುಳಿದ ನಂತರ ಯೋಧರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!