ವಯಸ್ಸಾಗುತ್ತಿದ್ದಂತೆ ಜೀವನದಲ್ಲಿ ನೆಮ್ಮದಿ, ಸ್ಥಿರತೆ ಹಾಗೂ ಸಂತೋಷದ ಅಗತ್ಯ ಹೆಚ್ಚಾಗುತ್ತದೆ. ಆದರೆ ತಾತ್ಕಾಲಿಕ ಒತ್ತಡಗಳು, ನಿರೀಕ್ಷೆಗಳ ಜಾಬ್ದಾರಿ ಮತ್ತು ಆಂತರಿಕ ಗೊಂದಲಗಳಿಂದ ಮನಸ್ಸಿನಲ್ಲಿ ಶಾಂತತೆ ಇರದು. ಹೀಗಾಗಿ ಹೆಚ್ಚು ಸಂತೋಷವಾಗಿ ಇರಬೇಕೆಂದರೆ, ಕೆಲವು ಹಳೆಯ ಅಭ್ಯಾಸಗಳನ್ನು ಬದಲಾಯಿಸುವುದು ಬಹುಮುಖ್ಯ. ಇಲ್ಲಿವೆ ಸಂತೋಷದ ಜೀವನದತ್ತ ದಾರಿ ತೋರಿಸುವ ಸಕಾರಾತ್ಮಕ ಬದಲಾವಣೆಗಳು.
ಸಾಮಾಜಿಕ ಜಾಲತಾಣದಿಂದ ಅಂತರವಿಡಿ:
ಅತಿಯಾಗಿ ಮೊಬೈಲ್‌ನಲ್ಲಿ ಕಾಲ ಕಳೆಯುವುದು ನಿರರ್ಥಕ. ನಿರಂತರ ಸ್ಕ್ರೋಲ್ ಮಾಡುವುದು ನಮ್ಮ ಆತ್ಮಸ್ಥೈರ್ಯವನ್ನೂ ಹಾಳುಮಾಡುತ್ತದೆ. ದಿನಕ್ಕೆ ನಿರ್ಧಿಷ್ಟ ಸಮಯ ಮಾತ್ರ ಬಳಸುವುದರಿಂದ ಮನಸ್ಸು ಹಗುರವಾಗುತ್ತದೆ.
ಹಳೆಯ ತಪ್ಪುಗಳ ಪಶ್ಚಾತ್ತಾಪ ಬೇಡ:
ತಪ್ಪುಗಳು ನಮ್ಮ ಬದುಕಿನ ಭಾಗ. ಅವುಗಳಿಂದ ಪಾಠ ಕಲಿಯುವುದು ಒಳ್ಳೆಯದು, ಆದರೆ ಅದನ್ನ ಹಿಡಿದುಕೊಂಡು ದುಃಖಿಸುವುದನ್ನು ಬಿಡಿ. ಕ್ಷಮೆ ಮತ್ತು ಮುನ್ನಡೆಗೆ ಆದ್ಯತೆ ನೀಡಿ.
ವಿಷಪೂರಿತ ಸಂಬಂಧಗಳಿಂದ ದೂರವಿರಿ:
ನಿಮ್ಮಲ್ಲಿದ್ದ ಶಕ್ತಿ, ಶಾಂತಿ, ಗೌರವವನ್ನು ಕಳೆಯುವ ಸಂಬಂಧಗಳು ನಿಮಗೆ ತೊಂದರೆ ನೀಡುತ್ತವೆ. ಹೀಗಾಗಿ ಅಂತಹವರಿಗೆ ದೂರವಿರುವುದೇ ಒಳಿತು.
ಆಸಕ್ತಿಗಳಿಗೆ ಮೌಲ್ಯ ನೀಡಿ:
ಹವ್ಯಾಸಗಳು ಕೇವಲ ಮನರಂಜನೆಗಾಗಿ ಅಲ್ಲ. ಅವು ಜೀವನಕ್ಕೆ ಉತ್ಸಾಹ ನೀಡುತ್ತವೆ. ಓದು, ಬರಹ, ನೃತ್ಯ, ಹಾಡುಗಳೆಲ್ಲ ನಿಮಗೆ ಹೊಸ ಚೈತನ್ಯ ನೀಡಬಹುದು.
ಶಾರೀರಿಕ ಚಟುವಟಿಕೆ ಅವಶ್ಯಕ:
ದಿನಚರಿಯಲ್ಲೇ ಯೋಗ ಅಥವಾ ವಾಕಿಂಗ್ ಸೇರಿಸಿ. ಇದು ದೇಹ-ಮನಸ್ಸಿಗೆ ಚೈತನ್ಯ ನೀಡುತ್ತದೆ.
ಬದಲಾವಣೆ ಸ್ವೀಕರಿಸಿ:
ಜೀವನ ಒಂದು ಬದಲಾವಣೆಯ ಸಾಗರ. ಹೊಸ ಅನುಭವಗಳು ಮನಸ್ಸಿಗೆ ಹೊಸ ಬೆಳಕು ನೀಡುತ್ತವೆ. ನಿಮಗೆ ಖುಷಿ ನೀಡುವ ಮಾರ್ಗವನ್ನು ಹುಡುಕಿ, ನಿಮ್ಮ ಆರಾಮ ವಲಯದಿಂದ ಹೊರ ಬನ್ನಿ.