ಬದುಕಿನಲ್ಲಿ ಪ್ರತಿಯೊಬ್ಬರಿಗೂ ಸವಾಲುಗಳು, ಅಡಚಣೆಗಳು ಅನಿವಾರ್ಯ. ಅವುಗಳನ್ನು ತಪ್ಪಿಸಿಕೊಳ್ಳೋದು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ಆದರೆ ಆ ತೊಂದರೆಗಳನ್ನು ಹೇಗೆ ನಿಭಾಯಿಸುತ್ತೇವೆ ಎನ್ನುವುದೇ ವ್ಯಕ್ತಿಯ ಶಕ್ತಿ, ಆತ್ಮಸ್ಥೈರ್ಯ ಮತ್ತು ಯಶಸ್ಸಿನ ಮೌಲ್ಯವನ್ನು ನಿರ್ಧರಿಸುತ್ತೆ. ಈ ದೃಷ್ಟಿಕೋನದಲ್ಲಿ, ನಾವು ನೀವು ಯಾವ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತೇವೆ ಎನ್ನುವುದು ಮುಖ್ಯ.
ಸವಾಲುಗಳು ಜೀವನದ ನೈಜ ಭಾಗ:
ಯಾರ ಜೀವನವೂ ಸಿಪ್ಪೆ ಸುಲಿದು ಬಾಳೆಹಣ್ಣು ತಿಂದಷ್ಟು ಸುಲಭವಲ್ಲ. ಒಬ್ಬ ವ್ಯಕ್ತಿಯು ಜೀವನದಲ್ಲಿ ಎಷ್ಟೇ ಮುನ್ನಡೆದರೂ, ಆತನಿಗೆ ಸಮಸ್ಯೆಗಳು, ಸವಾಲುಗಳು ಬಂದೆಯೇ ಬರುತ್ತವೆ. ಇದನ್ನು ಒಪ್ಪಿಕೊಳ್ಳುವುದು ಮೊದಲ ಹೆಜ್ಜೆ.
ಸವಾಲುಗಳು ಶಕ್ತಿಯನ್ನು ನಿರ್ಮಿಸುತ್ತವೆ:
ಸವಾಲುಗಳನ್ನು ಎದುರಿಸಿದಾಗ ಆತನು ಆತ್ಮಸ್ಥೈರ್ಯ, ಧೈರ್ಯ ಮತ್ತು ಸಮಸ್ಯೆಗಳಿಗೆ ಪರಿಹಾರ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾನೆ. ಈ ಅನುಭವವೇ ಅವನನ್ನು ಇನ್ನಷ್ಟು ಶಕ್ತಿವಂತನಂತೆ ಮಾಡುತ್ತದೆ.
ಪ್ರತಿಯೊಂದು ಸವಾಲುಗಳು ಪಾಠ ಕಲಿಸುತ್ತದೆ:
ಸವಾಲುಗಳು ಹೊಸ ಪಾಠವನ್ನು ಕಲಿಸುತ್ತದೆ. ತೊಂದರೆಗಳಿಂದ ಜೀವನದ ನೈಜ ಅರ್ಥ ತಿಳಿಯುತ್ತದೆ ಹಾಗೂ ಮುಂದಿನ ವೇಳೆ ಏನು ತಪ್ಪು ಮಾಡಬಾರದು ಎಂಬ ಅರಿವು ನಮಗೆ ನೀಡುತ್ತದೆ.
ಸವಾಲುಗಳು ಗುರಿಯನ್ನು ಸ್ಪಷ್ಟಗೊಳಿಸುತ್ತವೆ:
ಸವಾಲುಗಳು ಆಗಾಗ ವ್ಯಕ್ತಿಗೆ ತನ್ನ ಗುರಿಯನ್ನು ಪುನಃ ನೆನಪಿಸಲು ಸಹಾಯ ಮಾಡುತ್ತವೆ. ಅದು ಆತನು ಎಷ್ಟು ಬದ್ಧನಾಗಿದ್ದಾನೆ ಎಂಬುದನ್ನು ಪರೀಕ್ಷಿಸುತ್ತೆ.
ಸವಾಲುಗಳನ್ನು ಎದುರಿಸುವುದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ:
ಒಬ್ಬ ವ್ಯಕ್ತಿ ಸವಾಲುಗಳನ್ನು ಸಮರ್ಥವಾಗಿ ಎದುರಿಸಿದಾಗ ಅವನ ಆತ್ಮವಿಶ್ವಾಸ ಮತ್ತು ನಂಬಿಕೆ ಹೆಚ್ಚಾಗುತ್ತದೆ. ಇದು ಮುಂದಿನ ಹಂತಗಳತ್ತ ಸಾಗಲು ಅವನಿಗೆ ಧೈರ್ಯ ನೀಡುತ್ತದೆ.
ಜೀವನದಲ್ಲಿ ತೊಂದರೆಗಳನ್ನು ತಲೆಯೆತ್ತಿ ನೋಡಬೇಕೆ ಹೊರತು ಅವುಗಳನ್ನು ತಪ್ಪಿಸುವುದಲ್ಲ. ಶಕ್ತಿ, ಆತ್ಮಸ್ಥೈರ್ಯ ಮತ್ತು ಹೋರಾಟದ ಮನೋಭಾವನೆ ನಮ್ಮನ್ನು ನಿಜವಾದ ವಿಜೇತರನ್ನಾಗಿ ಮಾಡುತ್ತದೆ.