LIFE | ದೀರ್ಘಕಾಲದ ಸಂತೋಷಕರ ಬದುಕಿಗೆ ಈ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ!

ನಮ್ಮ ಜೀವನಶೈಲಿ ಮತ್ತು ದಿನನಿತ್ಯದ ಚಟುವಟಿಕೆಗಳು ನಮ್ಮ ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಸುಖಮಯ ಹಾಗೂ ದೀರ್ಘಕಾಲದ ಆರೋಗ್ಯಕರ ಜೀವನವನಕ್ಕೆ ಕೆಲ ಸರಳ ಆದರೆ ಪರಿಣಾಮಕಾರಿ ಅಭ್ಯಾಸಗಳನ್ನು ಪಾಲನೆ ಮಾಡುವುದು ಅವಶ್ಯಕ. ಈ ಹಿನ್ನಲೆಯಲ್ಲಿ, ನೆಮ್ಮದಿಯ ಬದುಕಿಗಾಗಿ ನೀವು ಪಾಲಿಸಬಹುದಾದ ನಾಲ್ಕು ಮುಖ್ಯ ಅಂಶಗಳನ್ನು ಇಲ್ಲಿವೆ:

ಒತ್ತಡ ನಿಯಂತ್ರಣಕ್ಕೆ ಪ್ರಾಮುಖ್ಯತೆ ನೀಡಿ
ನಿತ್ಯ ಜೀವನದ ಒತ್ತಡವು ದೀರ್ಘಕಾಲದ ಕಾಯಿಲೆಗಳ ಮೂಲವಾಗಬಹುದು. ಆಗಾಗ ಧ್ಯಾನ, ಯೋಗ ಅಥವಾ ನಿಶಬ್ದದಲ್ಲಿ ಸಮಯ ಕಳೆಯುವುದು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ದಿನದಲ್ಲಿ ಕೆಲ ನಿಮಿಷಗಳನ್ನು ನಿಶ್ಚಲವಾಗಿ ಕಳೆಯುವುದು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡುವಲ್ಲಿ ಸಹಾಯಕ.

Emotional intelligence, balance emotion control feeling between work stressed or sadness and happy lifestyle concept, mindful calm woman using her hand to balance smile and sad face. Emotional intelligence, balance emotion control feeling between work stressed or sadness and happy lifestyle concept, mindful calm woman using her hand to balance smile and sad face. stress control stock illustrations

ಸಾಮಾಜಿಕ ಸಂಬಂಧಗಳ ಬೆಳೆವಣಿಗೆ
ವೈಯಕ್ತಿಕ ಸಂಬಂಧಗಳು ಮನುಷ್ಯನ ಸಂತೋಷದ ಮೂಲವಾಗಿದೆ. ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಜೀವನಕ್ಕೆ ಉದ್ದೇಶ ಹಾಗೂ ನೆಮ್ಮದಿಯ ಭಾವನೆ ನೀಡುತ್ತದೆ. ದಿನದವರೆಗೂ ಕೆಲವು ಕ್ಷಣಗಳನ್ನು ಅವರ ಜೊತೆಗೆ ಕಳೆಯುವ ಅಭ್ಯಾಸವಿರಲಿ.

Cropped shot of an unrecognisable group of people sitting together and stacking their hands in the middle Let's make it a good and sober week SOCIAL RELATIONSHIP stock pictures, royalty-free photos & images

ಆಹಾರ ಮತ್ತು ವಿಶ್ರಾಂತಿಯಲ್ಲಿ ಸಮತೋಲನ
ಆಹಾರವು ಆರೋಗ್ಯದ ಮೂಲದಂತೆ, ನಿದ್ರೆಯು ಪುನಶ್ಚೇತನದ ಶಕ್ತಿಯಾಗುತ್ತದೆ. ಪೌಷ್ಟಿಕಾಂಶದಿಂದ ಕೂಡಿದ ಆಹಾರ ಸೇವನೆಯೊಂದಿಗೆ ನಿರಂತರ ನಿದ್ರೆ ಚಕ್ರವನ್ನೂ ಕಾಯ್ದುಕೊಳ್ಳಬೇಕು. ರಾತ್ರಿಯ 7-8 ಗಂಟೆಗಳ ನಿದ್ರೆ ದೇಹಕ್ಕೆ ಅಗತ್ಯವಿದೆ.Indian guy daydreaming Indian guy daydreaming and rest at home. Asian man relaxed and sleep on sofa indoor. Handsome male model.  rest stock pictures, royalty-free photos & images

ಸಂತೋಷ ನೀಡುವ ಚಟುವಟಿಕೆಗಳಿಗೆ ಸಮಯ ಮೀಸಲಿಡಿ
ನಿಮ್ಮ ಹವ್ಯಾಸ, ಕಲಿಕೆ, ಸಂಗೀತ ಅಥವಾ ನಟನೆ – ಯಾವುದೇ ಆಗಿರಲಿ – ಮನಸ್ಸಿಗೆ ಉಲ್ಲಾಸ ನೀಡುವ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳಿ. ಇದು ನಿಮ್ಮ ಮನೋಬಲವನ್ನು ಬೆಳೆಸುವುದಲ್ಲದೆ, ಜೀವನವನ್ನು ಸಂಪೂರ್ಣವಾಗಿ ಅನುಭವಿಸಲು ಸಹಾಯ ಮಾಡುತ್ತದೆ.

Quarantine, Stay at Home Activities Listening, Gardening, Yoga, Working, Watching, Cooking, Sewing, Playing and Listening Music YOUR HOBBIES stock illustrations

ಇವುಗಳನ್ನು ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ, ನಿಮ್ಮ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದಲ್ಲಿ ಗಂಭೀರ ಬದಲಾವಣೆಗಳನ್ನೇ ಕಾಣಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!