ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿರಬೇಕು, ನೆಮ್ಮದಿಯಿಂದ ಜೀವನ ಸಾಗಿಸಬೇಕು ಅನ್ನೋ ಆಸೆ ಇರುತ್ತೆ. ಆದರೆ, ಈ ನೆಮ್ಮದಿ ಮತ್ತು ಶಾಂತಿಗೆ ಅಡಚಣೆಯಾಗುವಂತಹ ಕೆಲವು ಗುಣಗಳು ನಮ್ಮ ಸ್ವಭಾವದಲ್ಲೇ ಇರುತ್ತೆ. ಆದರೆ ಹಲವು ಬಾರಿ ನಾವು ಗಮನ ಕೊಡದೇ ಇರೋ ಈ ಗುಣಗಳು ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ ಮಾಡುವ ಸಾಧ್ಯತೆ ಇದೆ. ಅಹಂಕಾರ, ಹೋಲಿಕೆ, ಇತರರ ಅನುಮೋದನೆಗಾಗಿ ಬದುಕುವುದು, ತಪ್ಪುಗಳನ್ನು ಒಪ್ಪಿಕೊಳ್ಳದೆ ನಿರಾಕರಿಸುವ ಮನೋಭಾವನೆ – ಇವೆಲ್ಲವೂ ಒಬ್ಬ ವ್ಯಕ್ತಿಯು ಸಂತೋಷದಿಂದ ಬದುಕುವುದಕ್ಕೆ ಅಡ್ಡಿಯಾಗುವ ಅಂಶಗಳಾಗಿವೆ.
ಯಾವಾಗಲೂ ತಾವೇ ಸರಿ ಅನ್ನೋ ಅಹಂಕಾರ: ಅಹಂಕಾರದ ಅಡಿಯಲ್ಲಿ “ನಾನೇ ಸರಿ” ಅನ್ನೋ ಧೋರಣೆ ಬೆಳೆದರೆ, ಇತರರ ಅಭಿಪ್ರಾಯಗಳು ಅರ್ಥಹೀನವಾಗುತ್ತವೆ. ಇದರಿಂದ ನಂಬಿಕೆಯ ನಂಟುಗಳು ದುರ್ಬಲವಾಗುತ್ತವೆ. ಅದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಮೆಚ್ಚುಗೆಯಿಗಾಗಿ ಬದುಕುವವರು ತಮ್ಮ ಸ್ವಂತ ಸಂತೋಷವನ್ನು ಬಲಿ ಕೊಡುತ್ತಾರೆ.
ಇತರರ ಅನುಮೋದನೆಗಾಗಿ ಬದುಕುವುದು: ತಾವು ಬಲಿಪಶು ಎಂಬ ಭಾವನೆ ಬೆಳೆಸಿಕೊಳ್ಳುವುದು ಸಹ ಜೀವಿತದಲ್ಲಿ ನಿರಾಸೆಯ ಪ್ರಭಾವವನ್ನೇ ಉಂಟುಮಾಡುತ್ತದೆ. ಎಲ್ಲಾ ಹೀನ ಘಟನೆಗಳಿಗೂ ತಮ್ಮ ಹಣೆಬರಹವೇ ಕಾರಣ ಎಂಬ ಭಾವನೆ ವ್ಯಕ್ತಿಗೆ ಮುನ್ನಡೆಸುವ ಬದಲಿಗೆ ಹಿಮ್ಮೆಟ್ಟಿಸುತ್ತೆ.
ಇತರರೊಂದಿಗೆ ಹೋಲಿಕೆ ಮಾಡುವುದು: ಎಲ್ಲದಕ್ಕಿಂತ ಹೆಚ್ಚು ವಿನಾಶಕಾರಿ ಅಂದ್ರೆ – ನಮ್ಮ ಬದುಕನ್ನು ಇತರರೊಂದಿಗೆ ಹೋಲಿಸುವುದು. ಇತರರ ಜೀವನಶೈಲಿಯಿಂದ ಪ್ರೇರಣೆ ಪಡೆದುಕೊಳ್ಳುವುದು ಒಳ್ಳೆಯದು, ಆದರೆ ಅಸೂಯೆಯಿಂದ ಕೂಡಿದ ಹೋಲಿಕೆ ಮನಸ್ಸಿಗೆ ನೋವು ಮಾತ್ರವನ್ನೇ ಉಂಟುಮಾಡುತ್ತದೆ.
ತಪ್ಪುಗಳನ್ನು ಒಪ್ಪಿಕೊಳ್ಳದ ಗುಣ: ಇವೆಲ್ಲಕ್ಕಿಂತ ಭೀಕರವಾದುದು – ತಪ್ಪುಗಳನ್ನು ಒಪ್ಪಿಕೊಳ್ಳದ ಗುಣ. ಇದು ವ್ಯಕ್ತಿಯ ಅಹಂಕಾರದ ಪ್ರತೀಕ. ಮನುಷ್ಯ ತಪ್ಪು ಮಾಡುತ್ತಾನೆ, ಆದರೆ ಅದನ್ನು ಒಪ್ಪಿಕೊಳ್ಳುವುದು ಮತ್ತು ಬದಲಾವಣೆ ತರುವುದು ಜೀವನದ ಶ್ರೇಷ್ಠ ಗುಣವೆಂದು ಪರಿಗಣಿಸಲಾಗುತ್ತದೆ.
ಒಟ್ಟಿನಲ್ಲಿ, ಈ ಎಲ್ಲ ನಕಾರಾತ್ಮಕ ಗುಣಗಳನ್ನು ಬಿಟ್ಟು ಮನಸ್ಸಿನಲ್ಲಿ ಸ್ವಚ್ಛತೆ, ನಿಷ್ಠೆ ಮತ್ತು ಸಹಾನುಭೂತಿಯನ್ನು ಬೆಳೆಸಿದರೆ ಮಾತ್ರ ನಮ್ಮ ಜೀವನದಲ್ಲಿ ನಿಜವಾದ ಸಂತೋಷ, ಶಾಂತಿ ಮತ್ತು ನೆಮ್ಮದಿ ಒದಗುತ್ತದೆ.