ಜೀವನದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಕನಸುಗಳು ಮತ್ತು ಬಯಕೆಗಳು ಇರುತ್ತವೆ. ಆದರೆ ಕೆಲವೊಮ್ಮೆ ಪರಿಸ್ಥಿತಿಗಳ ಒತ್ತಡ, ತಪ್ಪು ನಿರ್ಧಾರಗಳು ಅಥವಾ ನಕಾರಾತ್ಮಕ ಮನೋಭಾವವು ನಾವು ಬಯಸಿದ ಬದುಕಿನಿಂದ ದೂರ ಮಾಡುವ ಸಾಧ್ಯತೆ ಇದೆ. ಇಂತಹ ಸಂದರ್ಭಗಳಲ್ಲಿ, ಸ್ವಲ್ಪ ಆತ್ಮಪರಿಶೀಲನೆ ಮಾಡಿ, ಕೆಲವು ಕೆಟ್ಟ ಅಭ್ಯಾಸಗಳನ್ನು ಬದಲಿಸುವ ಮೂಲಕ ಜೀವನದಲ್ಲಿ ಹೊಸ ಬೆಳವಣಿಗೆ ಮತ್ತು ಸಂತೋಷವನ್ನು ಕಾಣಬಹುದು.
ಮುಂದೂಡುವಿಕೆ
ಅನೇಕರು ತಮ್ಮ ಕೆಲಸಗಳನ್ನು ಬೇರೆ ದಿನಕ್ಕೆ ಹಾಕಿಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಕಾರಣ ಏನೇ ಇರಲಿ, ನಿರಂತರ ವಿಳಂಬವು ಒತ್ತಡ ಹೆಚ್ಚಿಸಿ, ಸಾಧನೆಗೆ ಅಡ್ಡಿ ಉಂಟುಮಾಡುತ್ತದೆ.
ನಕಾರಾತ್ಮಕ ಚಿಂತನೆ
“ನಾನು ಮಾಡಲಾರೆ”, “ಇದು ಅಸಾಧ್ಯ” ಎಂಬ ಮನೋಭಾವ ಕಾರ್ಯಾರಂಭಕ್ಕೂ ಮುನ್ನವೇ ಸೋಲಿನ ಭಾವನೆ ಉಂಟುಮಾಡುತ್ತದೆ. ಸಕಾರಾತ್ಮಕ ಯೋಚನೆಗಳನ್ನು ಬೆಳೆಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
ಸ್ವಯಂ ವಿಶ್ವಾಸದ ಕೊರತೆ
ಸೋಲು-ಗೆಲುವು ಜೀವನದ ಭಾಗ. ವೈಫಲ್ಯವನ್ನು ಭಯಪಡುವ ಬದಲು, ಅದರಿಂದ ಪಾಠ ಕಲಿಯುವುದು ವೈಯಕ್ತಿಕ ಬೆಳವಣಿಗೆಗೆ ಸಹಾಯಕ.
ಜನರನ್ನು ಸಂತೋಷಪಡಿಸುವ ಅಭ್ಯಾಸ
ಎಲ್ಲರನ್ನು ಮೆಚ್ಚಿಸಲು ಪ್ರಯತ್ನಿಸುವ ಬದಲು, ಸ್ವತಃ ನಿಮಗೆ ಸಂತೋಷ ನೀಡುವ ಕೆಲಸಗಳಿಗೆ ಆದ್ಯತೆ ಕೊಡಿ.
ಇತರರೊಂದಿಗೆ ಹೋಲಿಕೆ
ಪ್ರತಿಯೊಬ್ಬರೂ ವಿಭಿನ್ನರು. ಹೋಲಿಕೆ ಮಾಡುವುದು ಸ್ವಾಭಿಮಾನ ಮತ್ತು ಆತ್ಮವಿಶ್ವಾಸಕ್ಕೆ ಹಾನಿಕಾರಕ. ನಿಮ್ಮ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರಿತು ಬೆಳೆಯಿರಿ.
ನೆಪ ಹೇಳುವುದು
ನೆಪ ಹೇಳುವ ಅಭ್ಯಾಸ ಜವಾಬ್ದಾರಿಯಿಂದ ದೂರ ಇಡುತ್ತದೆ. ಬದಲಿಗೆ ಕಾರ್ಯಗಳನ್ನು ಪ್ರಾಮಾಣಿಕವಾಗಿ ಪೂರ್ಣಗೊಳಿಸುವುದು ಉತ್ತಮ.
ಈ ಕೆಟ್ಟ ನಡವಳಿಕೆಗಳಿಗೆ ವಿದಾಯ ಹೇಳಿ, ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿ ಮತ್ತು ನಿಮ್ಮ ಗುರಿಗಳಿಗೆ ಬದ್ಧರಾಗಿ, ನೀವು ಬಯಸುವ ಜೀವನವನ್ನು ರೂಪಿಸಬಹುದು.