ಜೀವನದಲ್ಲಿ ತಪ್ಪುಗಳು ಆಗೋದು ಸಹಜ. ಆದರೆ ಆ ತಪ್ಪನ್ನ ಒಪ್ಪಿಕೊಂಡು “sorry” ಅಂತ ಹೇಳೋ ಕ್ಷಣಕ್ಕೆ ನಾನು ಕ್ಷಮೆ ಕೇಳಿದ್ರೆ ನನ್ನ ಮೌಲ್ಯ ಕಡಿಮೆಯಾಗುತ್ತಾ? ನಾನು ಚಿಕ್ಕವನಾಗಿಬಿಡ್ತೀನಾ? ಅನ್ನೋ ಪ್ರಶ್ನೆ ಮೂಡುತ್ತೆ. ಸಮಾಜ ನಮಗೆ ಯಾವಾಗಲೂ ಗೆಲ್ಲೋದು, ಗಟ್ಟಿಯಾಗಿರೋದು, ತಪ್ಪೇ ಮಾಡದಿರೋದು ತುಂಬಾ ಮಹತ್ವದ್ದು ಅನ್ನೋ ಭಾವನೆ ಕಲಿಸಿಬಿಟ್ಟಿದೆ. ಆದರೆ ನಿಜ ಜೀವನದಲ್ಲಿ ಕ್ಷಮೆ ಕೇಳೋದು ದುರ್ಬಲತೆಯ ಸೂಚಕ ಅಲ್ಲ; ಅದು ಒಳಗಿನ ಬಲದ ಪ್ರತೀಕ.
Sorry ಕೇಳೋದು ಸೋಲು ಅಲ್ಲ, ಹೊಣೆಗಾರಿಕೆ:
ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳೋದು ಸುಲಭವಲ್ಲ. “ನಾನು ತಪ್ಪು ಮಾಡಿದ್ದೇನೆ” ಅಂತ ಹೇಳೋ ಧೈರ್ಯ ಇರಬೇಕು. ಕ್ಷಮೆ ಕೇಳೋ ವ್ಯಕ್ತಿ ತನ್ನ ಕೃತ್ಯಕ್ಕೆ ಹೊಣೆ ಹೊತ್ತುಕೊಳ್ಳ್ತಾನೆ. ಇದು ಚಿಕ್ಕತನವಲ್ಲ, ಪರಿಪಕ್ವತೆಯ ಲಕ್ಷಣ.
ಕ್ಷಮೆ ಕೇಳೋದು ಸಂಬಂಧಗಳನ್ನು ಉಳಿಸುತ್ತದೆ:
ಅಹಂಕಾರದಿಂದ “ಸಾರಿ” ಅನ್ನೋ ಒಂದೇ ಪದ ಹೇಳದೇ ಇದ್ದರೆ ದೊಡ್ಡ ಅಂತರಗಳು ನಿರ್ಮಾಣವಾಗುತ್ತವೆ. ಆದರೆ ಮನಸಾರೆ ಕ್ಷಮೆ ಕೇಳಿದ್ರೆ ಮುರಿದ ಸಂಬಂಧಗಳು ಮತ್ತೆ ಜೋಡನೆಯಾಗುತ್ತವೆ. ಸಂಬಂಧ ಉಳಿಸೋದು ಚಿಕ್ಕತನ ಅಲ್ಲ, ಬುದ್ಧಿವಂತಿಕೆ.
Sorry ಹೇಳೋದು ಆತ್ಮಗೌರವ ಕಡಿಮೆ ಮಾಡಲ್ಲ:
ಬಹುತೆಕರು ಕ್ಷಮೆ ಕೇಳಿದ್ರೆ ತಮ್ಮ ಗೌರವ ಹಾಳಾಗುತ್ತೆ ಅಂತ ಭಾವಿಸ್ತಾರೆ. ಆದರೆ ನಿಜವಾಗಿಯೂ ಗೌರವ ಬರೋದು ಸತ್ಯತೆ ಮತ್ತು ವಿನಯದಿಂದ. ತಪ್ಪು ಒಪ್ಪಿಕೊಳ್ಳುವ ವ್ಯಕ್ತಿಯನ್ನ ಜನ ಹೆಚ್ಚು ಗೌರವದಿಂದ ನೋಡ್ತಾರೆ.
ಕ್ಷಮೆ ಕೇಳಿದ್ರೆ ಮನಸ್ಸಿಗೆ ಶಾಂತಿ:
ತಪ್ಪು ಮಾಡಿದ guilt ಅನ್ನು ಮನಸ್ಸಿನಲ್ಲಿ ಹೊತ್ತುಕೊಂಡು ಬದುಕೋದು ತುಂಬಾ ಕಷ್ಟ. “ಸಾರಿ” ಅಂತ ಹೇಳಿದ ಕ್ಷಣಕ್ಕೆ ಆ ಭಾರ ಕಡಿಮೆಯಾಗುತ್ತೆ. ಮನಸ್ಸಿಗೆ ಶಾಂತಿ ಸಿಗುತ್ತೆ, ಜೀವನ ಹಗುರವಾಗುತ್ತೆ.
ಇದನ್ನೂ ಓದಿ: ಅಟ್ಲಾಂಟಿಕ್‌ನಲ್ಲಿ ರಷ್ಯಾ ಧ್ವಜವಿದ್ದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕ!
ದೊಡ್ಡವರು ಅನ್ನೋರು ತಪ್ಪೇ ಮಾಡದವರಲ್ಲ:
ನಿಜವಾದ ದೊಡ್ಡವರು ತಪ್ಪು ಮಾಡದೇ ಇರೋವರಲ್ಲ; ತಪ್ಪು ಮಾಡಿದಾಗ ಅದನ್ನು ಸರಿಪಡಿಸೋವರು. ಕ್ಷಮೆ ಕೇಳೋ ಗುಣ ಇರುವವನು ಜೀವನದಲ್ಲಿ ಮುಂದೆ ಹೋಗ್ತಾರೆ.
ಒಟ್ಟಿನಲ್ಲಿ, ಇನ್ನೊಬ್ಬರ ಹತ್ರ “ಸಾರಿ” ಕೇಳೋದ್ರಿಂದ ನಾವು ಚಿಕ್ಕವರಾಗಲ್ಲ. ಬದಲಾಗಿ, ನಮ್ಮೊಳಗಿನ ಮಾನವೀಯತೆ, ಬುದ್ಧಿಮತ್ತೆ ಮತ್ತು ಧೈರ್ಯ ಹೊರಬರುತ್ತೆ. ಕೆಲವೊಮ್ಮೆ ಒಂದೇ ಪದ Sorry ದೊಡ್ಡ ಅಂತರವನ್ನೇ ಅಳಿಸಿಬಿಡುತ್ತೆ.

