LIFE | ಬೇಜಾರಾದ್ರೂ ಇದು ನಿಜ! ಜೀವನದ ಈ 5 ಕಹಿ ಸತ್ಯಗಳನ್ನ ನೀವು ತಿಳ್ಕೊಳ್ಳೆಬೇಕು

ಜೀವನ ಎಂದರೆ ಸದಾ ಸುಖದ ದಾರಿ ಅಲ್ಲ. ನಿಜವಾದ ಜೀವನವನ್ನು ಅರ್ಥಮಾಡಿಕೊಳ್ಳಲು ಅದರ ಕಹಿ ಸತ್ಯಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಈ ಸತ್ಯಗಳು ಕೆಲವೊಮ್ಮೆ ನೋವನ್ನು ಉಂಟುಮಾಡಬಹುದು, ಆದರೆ ಅವು ವ್ಯಕ್ತಿತ್ವವನ್ನು ಬಲಪಡಿಸಲು ಸಹಾಯಕವಾಗುತ್ತವೆ. ಇಲ್ಲಿವೆ ಜೀವನದ ಕೆಲವು ಕಹಿ ಸತ್ಯಗಳು.

ಅವಶ್ಯಕತೆ ಇರುವಾಗ ಮಾತ್ರ ಬರುತ್ತಾರೆ
ಪ್ರತಿಯೊಬ್ಬರೂ ತಮ್ಮದೇ ಆದ ಜೀವನದಲ್ಲಿ ಬಿಸಿಯಾಗಿರುತ್ತಾರೆ. ಇತರರಿಂದ ಸದಾ ಗಮನ ಅಥವಾ ಸಹಾಯ ಸಿಗುವುದು ಅಸಾಧ್ಯ. ಹೆಚ್ಚಿನವ್ರು ತಮಗೆ ನಿಮ್ಮ ಅವಶ್ಯಕತೆ ಇದ್ದಾಗ ಮಾತ್ರವೇ ನಿಮ್ಮ ಬಳಿ ಬರುತ್ತಾರೆ. ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳುವುದು ಅನಿವಾರ್ಯ.

ಜೀವನ ಎಂದರೆ ಸದಾ ನ್ಯಾಯವಿರಲ್ಲ
ಒಳ್ಳೆಯವರು ಸದಾ ಗೆಲ್ಲಲ್ಲ, ಕೆಟ್ಟವರು ಸೋಲಲ್ಲ. ಜೀವನದಲ್ಲಿ ಅನ್ಯಾಯ ಮತ್ತು ಅಸಮಾನತೆ ಆಗಾಗ್ಗೆ ಸಂಭವಿಸುತ್ತವೆ. ಇದು ಜೀವನದ ಅಂತರಂಗದ ಭಾಗವಾಗಿರುವ ಸತ್ಯ.

Sadness: Reasons, Diagnosis and Therapy For Sadness

ನೀವು ಎಷ್ಟೇ ಪ್ರಯತ್ನಿಸಿದರೂ ಎಲ್ಲರಿಗೂ ಮೆಚ್ಚುಗೆಯಾಗಲು ಸಾಧ್ಯವಿಲ್ಲ
ಎಲ್ಲರನ್ನು ಸಂತೋಷಪಡಿಸಲು ನೀವು ಮಾಡಬಹುದಾದಷ್ಟು ಪ್ರಯತ್ನಿಸಿದರೂ, ಕೆಲವು ಮಂದಿ ಯಾವಾಗಲೂ ನಿಮ್ಮನ್ನು ಟೀಕಿಸುತ್ತಾರೆ. ಆದ್ದರಿಂದ ಸತ್ಯವಾಗಿರಿ, ನಿಮ್ಮನ್ನು ನೀವು ಮೆಚ್ಚಿಕೊಳ್ಳಿ.

You can't please everybody - Allround Achievers

ಸಮಯ ಯಾರಿಗೂ ಕಾಯುವುದಿಲ್ಲ
ಸಮಯವು ಹೋರಾಟವಿಲ್ಲದೆ ಮುಂದೆ ಸಾಗುತ್ತದೆ. ನೀವು ಅದನ್ನು ಸರಿಯಾಗಿ ಉಪಯೋಗಿಸದಿದ್ದರೆ, ಇಲ್ಲದಿದ್ದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.

Time waits for no one.

ಮರಣ ಎಲ್ಲರಿಗೂ ಅನಿವಾರ್ಯ
ಬಾಳಿದವನು ಕೊನೆಗೆ ಸಾವನ್ನು ಎದುರಿಸಬೇಕೇಬೇಕು. ನಮ್ಮದು ಅಮರತ್ವವಲ್ಲ. ಈ ಸತ್ಯವನ್ನು ಅರ್ಥಮಾಡಿಕೊಂಡಾಗ, ಪ್ರತಿದಿನವನ್ನು ಅರ್ಥಪೂರ್ಣವಾಗಿ ಬದುಕಲು ಪ್ರೇರಣೆಯಾಗುತ್ತದೆ.

Everyone you know will DIE one day | by Languages with Luciano | Medium

ಈ ಕಹಿ ಸತ್ಯಗಳನ್ನು ಸ್ವೀಕರಿಸಿ ಬದುಕನ್ನು ನಿಷ್ಠೆಯಿಂದ ಮತ್ತು ಪ್ರಾಮಾಣಿಕವಾಗಿ ನಡೆಸಿದಾಗ, ಜೀವನ ಸಾರ್ಥಕವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!