ಜೀವನ ಎಂದರೆ ಕೇವಲ ಜೀವಿಸೋದು ಮಾತ್ರವಲ್ಲ, ಅದು ಭಾವನೆಗಳ ಪಯಣ. ಕೆಲವೊಮ್ಮೆ ನಾವು ಅನವಶ್ಯಕವಾಗಿ ದ್ವೇಷ, ವಿಷಾದ, ನಿರೀಕ್ಷೆ ಮತ್ತು ಭಯವನ್ನು ಹೊತ್ತುಕೊಂಡು ನಡೆದು ಜೀವನವನ್ನೇ ಭಾರವಾಗಿಸಿಕೊಳ್ಳುತ್ತೇವೆ. ಆದರೆ ಈ ಭಾರ ಇಳಿಸಿದರೆ ಮಾತ್ರ ನಿಜವಾದ ಖುಷಿ ಮತ್ತು ನೆಮ್ಮದಿ ದೊರೆಯುತ್ತದೆ. ಕೆಲ ವಿಷಯಗಳನ್ನು ಬಿಟ್ಟು ಮುಂದೆ ಸಾಗುವುದೇ ಸಂತೋಷದ ಬದುಕಿನ ಗುಟ್ಟು.
- ಹಳೆಯ ನೋವುಗಳನ್ನು ಬಿಡಿ: ಹಿಂದಿನ ತಪ್ಪುಗಳು ಅಥವಾ ಕೈ ತಪ್ಪಿದ ಅವಕಾಶಗಳ ಬಗ್ಗೆ ಚಿಂತಿಸುವುದು ಈಗಿನ ಸಂತೋಷವನ್ನು ಕಸಿದುಕೊಳ್ಳುತ್ತದೆ. ಆಗಿ ಹೋಗಿದ್ದನ್ನು ಮರೆತು, ಅದರಿಂದ ಕಲಿತು ಮುಂದಕ್ಕೆ ಹೋಗಿ.
- ನಿರೀಕ್ಷೆಗಳನ್ನು ಕಡಿಮೆ ಮಾಡಿ
- ಯಾರಿಂದಲೂ ಏನನ್ನೂ ನಿರೀಕ್ಷಿಸದಿರಿ. ನಿರೀಕ್ಷೆ ಹೆಚ್ಚಾದಷ್ಟು ನಿರಾಶೆ ಹೆಚ್ಚಾಗುತ್ತದೆ. ಜೀವನ ಬಂದ ಹಾಗೆ ಸ್ವೀಕರಿಸಿದರೆ ಸಂತೋಷ ತನಂತಾನೇ ಬರುತ್ತದೆ.
- ದ್ವೇಷವನ್ನು ಬಿಡಿ: ದ್ವೇಷ ಮತ್ತು ಕೋಪ ಮನಸ್ಸನ್ನು ಕಾಡುತ್ತದೆ. ಕ್ಷಮೆ ನೀಡುವುದು ದುರ್ಬಲತೆ ಅಲ್ಲ, ಅದು ಮನಸ್ಸಿನ ಶಾಂತಿಗೆ ದಾರಿ.
- “ಇಲ್ಲ” ಎನ್ನಲು ಕಲಿಯಿರಿ: ಎಲ್ಲರಿಗೂ ಸಂತೋಷ ಪಡಿಸಲು ನಮ್ಮನ್ನು ನಾವು ಕಳೆದುಕೊಳ್ಳಬೇಡಿ. ಆಗದ ಕೆಲಸಗಳಿಗೆ ಧೈರ್ಯದಿಂದ “ಇಲ್ಲ” ಎಂದು ಹೇಳಿ.
- ನಗುವನ್ನು ಮರೆಯಬೇಡಿ: ನಗು ಮನಸ್ಸಿಗೆ ಔಷಧ. ನಗುವುದರಿಂದ ಒತ್ತಡ ಕಡಿಮೆ ಆಗಿ ಮನಸ್ಸು ಹಗುರವಾಗುತ್ತದೆ.
- ಪ್ರಕೃತಿಯ ಜೊತೆ ಸಮಯ ಕಳೆಯಿರಿ: ಹಸಿರಿನ ನಿಸರ್ಗವೇ ಮನಸ್ಸಿನ ಔಷಧಿ. ಪ್ರಕೃತಿಯ ಸಾನ್ನಿಧ್ಯದಲ್ಲಿ ನಡೆಯುವುದರಿಂದ ಮನಸ್ಸು ಹಗುರಗೊಳ್ಳುತ್ತದೆ.

