LIFE | ಇರೋದ್ರಲ್ಲೇ ತೃಪ್ತಿಯಾಗಿ ಬದುಕೋದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ

ಇಂದು ಬಹುತೆಕ ಜನರು ಸಂಸ್ಕೃತಿ, ಸಂಪ್ರದಾಯ ಹಾಗೂ ಪ್ರಾಪಂಚಿಕ ಸೌಲಭ್ಯಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಎಲ್ಲದರಿಂದ ನಿಜವಾದ ತೃಪ್ತಿ ದೊರೆಯುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸರಳ ಜೀವನವೊಂದು ಮನಃಶಾಂತಿ ಮತ್ತು ಸಂಪೂರ್ಣ ಸಂತೋಷವನ್ನು ನೀಡಬಲ್ಲದು ಎಂಬ ಸತ್ಯವನ್ನು ತಜ್ಞರು ಅಭಿಪ್ರಾಯಪಡುತ್ತಾರೆ. ಇಂತಹ ಜೀವನಶೈಲಿಯಿಂದ ನಾವು ಅನೇಕ ಪ್ರಾಯೋಜನಗಳನ್ನು ಹೊಂದಬಹುದು.

A Young Woman Rests in the Grass With Pet Poodle Dog A happy young adult woman enjoys time at a park with her standard poodle, running, playing, and relaxing with the dog. happy life stock pictures, royalty-free photos & images

ಅಗತ್ಯಗಳನ್ನು ಕಡಿಮೆ ಮಾಡುವುದು:
ವಾಸ್ತವವಾಗಿ ನಾವು ಬದುಕಲು ಅಗತ್ಯವಿರುವ ವಸ್ತುಗಳು ಬಹಳ ಕಡಿಮೆಯಷ್ಟೇ. ಐಷಾರಾಮಿ ಜೀನವ ಶೈಲಿ ನಮಗೆ ತಾತ್ಕಾಲಿಕ ಆನಂದ ನೀಡಬಹುದು, ಆದರೆ ದೀರ್ಘಕಾಲಿಕ ತೃಪ್ತಿಗೆ ಅದು ಸಾಕಾಗದು. ಅಗತ್ಯವಿಲ್ಲದ ಬಯಕೆಗಳನ್ನು ಬಿಟ್ಟು ಸರಳವಾಗಿ ಬದುಕುವ ಮೂಲಕ ನಾವು ನಿಜವಾದ ಸುಖವನ್ನು ಅನುಭವಿಸಬಹುದು.

Father's mother's and baby's hand Father's mother's and baby's hand happy life stock pictures, royalty-free photos & images

ಅನುಭವಗಳಿಗೆ ಆದ್ಯತೆ:
ವಸ್ತುಗಳಿಗಿಂತಲೂ ಅನುಭವಗಳು ಹೆಚ್ಚು ಅಮೂಲ್ಯ. ಕೌಟುಂಬಿಕ ಸಮಯ, ಸ್ನೇಹಿತರ ಜತೆಗಿನ ಕ್ಷಣಗಳು, ಸ್ವಂತ ಕಾಲಕಳೆಯುವ ದಿನಚರಿ – ಇವೆಲ್ಲವೂ ಮಾನಸಿಕ ಆನಂದ ನೀಡುವ ಉತ್ಕೃಷ್ಟ ಮಾದರಿಗಳು. ಈವರೆಗೆ ಸಿಗದ ಸಾರ್ಥಕತೆಯ ಅನುಭವಗಳನ್ನು ಇದು ನೀಡಬಹುದು.

Tourist woman enjoy with beautiful view on mountains in Ella, Sri Lanka Tourist woman enjoy with beautiful view on mountains and valley in Ella, Sri Lanka, Little Adam Peak happy life stock pictures, royalty-free photos & images

ವರ್ತಮಾನದಲ್ಲಿ ಜೀವಿಸುವ ಶಕ್ತಿ:
ಹಿಂದಿನ ಘಟನೆಗಳ ಪಶ್ಚಾತ್ತಾಪ ಅಥವಾ ಭವಿಷ್ಯದ ಚಿಂತೆಗಳು ಬದುಕಿನಲ್ಲಿನ ಶಾಂತಿಯನ್ನು ಹಾಳು ಮಾಡುತ್ತವೆ. ಸದ್ಯದ ಕ್ಷಣವನ್ನು ಪೂರ್ತಿಯಾಗಿ ಅನುಭವಿಸುವುದರ ಮೂಲಕ ಜೀವನ ಸುಂದರವಾಗುತ್ತದೆ.

Happy young woman flying leafs in air towards sky. Happy young woman flying leafs in air towards sky. happy life stock pictures, royalty-free photos & images

ಆತ್ಮವಿಶ್ವಾಸ ಹಾಗೂ ಸ್ವಾತಂತ್ರ್ಯ:
ಐಷಾರಾಮಿ ಜೀವನವೊಂದು ನಗುಹಾಕಿದಂತೆ ಕಾಣಬಹುದು, ಆದರೆ ಅದು ಆತ್ಮವಿಶ್ವಾಸವನ್ನು ಕುಂದಿಸಬಹುದು. ಸರಳ ಜೀವನ ಶುದ್ಧ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ.

Woman jumping high after successful job interview Smiling woman jumping high after successful job interview happy life stock pictures, royalty-free photos & images

ತೃಪ್ತಿಯ ಬದುಕು:
ತಾವು ಹೊಂದಿರುವದರಲ್ಲಿ ತೃಪ್ತಿ ಕಂಡವರು ಯಾವತ್ತೂ ಖುಷಿಯಾಗಿರುತ್ತಾರೆ. ತ್ಯಾಗದ ಮನೋಭಾವನೆಯಿಂದ ಬದುಕಿದರೆ ನಿಜವಾದ ಸಮಾಧಾನ ದೊರೆಯುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!