ಕೆಲಸದ ಒತ್ತಡ ಧಾವಂತದ ಜೀವನದ ನಡುವೆ ಒಂದು ದಿನ “Lazy ” ಆಗಿರೋದ್ರಲ್ಲಿ ಏನು ತಪ್ಪಿಲ್ಲ. ಏಕೆಂದರೆ ವಾರದಲ್ಲಿ ಒಂದು ದಿನ ಹೀಗೆ ಕಳೆಯುವುದು ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಸೋಮಾರಿತನ, ಜಡತ್ವ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ. ಆದರೆ ವಾರದಲ್ಲಿ ಒಂದು ದಿನ ಏನು ಮಾಡದೇ, ಆರಾಮಾಗಿ ಕಾಲ ಕಳೆಯುವುದಿದೆಯೆಲ್ಲಾ ಅದು ನಮ್ಮ ನಮ್ಮ ಜೀವನ ಶೈಲಿಗೆ ತುಂಬಾ ಒಳ್ಳೆದಂತೆ.
ಅಂದಹಾಗೆ, ‘ಲೆಝಿ ಡೇ’ ಎಂದರೆ ಕೇವಲ ಸೋಮಾರಿತನವಲ್ಲ. ಇದು ಒಂದು ರೀತಿಯ ವಿಶ್ರಾಂತಿ, ಪುನಶ್ಚೇತನ ಮತ್ತು ಆತ್ಮಪರಿಶೀಲನೆಯ ಸಮಯ. ಇತ್ತೀಚೆಗೆ ಹೃದಯವಿಶೇಷಜ್ಞರು ಮತ್ತು ಮನೋವೈದ್ಯರು ನೀಡಿರುವ ವರದಿಗಳ ಪ್ರಕಾರ, ನಿಯಮಿತವಾಗಿ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ನೀಡುವ ದಿನಗಳನ್ನು ಇಟ್ಟುಕೊಳ್ಳುವುದು ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುತ್ತಂತೆ.
ಮನಸ್ಸಿಗೆ ನಿಟ್ಟುಸಿರು – Peace Button On!
ದಿನವಿಡೀ ಕೆಲಸ, ಓಡಾಟ, planning ನಿಂದ ಮನಸ್ಸು ಗೊಂದಲದಲ್ಲಿರುತ್ತೆ. ಅಂಥದ್ದರಲ್ಲಿ ಲೇಝಿ ಡೇ ಒಂದು Refresh ಬಟನ್ ಆಗಿ ಕೆಲಸ ಮಾಡುತ್ತೆ. ಇದು ನಮ್ಮ ನೆಗಟಿವ್ ಎನರ್ಜಿ ತೆಗಿದು, ಹೊಸದಾಗಿ ಎನರ್ಜಿ build ಮಾಡೋಕೆ ಸಹಾಯ ಮಾಡುತ್ತೆ.
ಕ್ರಿಯಾತ್ಮಕ ಚಿಂತನೆಗೆ ಅವಕಾಶ – Creative ಚಿಂತೆ
ಒಂದು ಕಡೆ ಕುಳಿತು, ಯಾವ ಕೆಲಸವನ್ನೂ plan ಮಾಡದೆ ಇದ್ದರೂ, ಬಾಯಿಲಿ ತುಂಬಾ ನಗೋಕೆ ನಮ್ಮ ತಲೆಯಲ್ಲಿ ಹಲವಾರು ಹೊಸ idea ಗಳು ಬರುತ್ತವೆ. ಏಕೆಂದರೆ ನಮ್ಮ ಮೆದುಳಿಗೆ ಆ ಸಮಯದಲ್ಲಿ extra space ಸಿಗುತ್ತೆ ಹೊಸದಾಗಿ ಯೋಚಿಸಲು.
ದೇಹಕ್ಕೆ ವಿಶ್ರಾಂತಿ – Rest is real productivity!
ಆಲಸ್ಯ ಎಂದರೇನು? ಒಮ್ಮೆ ವಿಶ್ರಾಂತಿ ಪಡೆಯೋದು. ಇದು ದೇಹದ ನರಗಳ ಮೇಲೆ ಒತ್ತಡ ಕಡಿಮೆ ಮಾಡುತ್ತೆ. muscles relax ಆಗುತ್ತೆ, ನಿದ್ರೆ ಜಾಸ್ತಿಯಾಗುತ್ತೆ, immunity ಕೂಡ settle ಆಗುತ್ತೆ. ಇಷ್ಟು ಸಾಕಲ್ವ? ಮತ್ತೇನು ಬೇಕು?
ಸಿಕ್ಕಾಪಟ್ಟೆ ಚೆನ್ನಾಗಿರೋ Feeling!
ಕೌಚ್ ಮೇಲೆ ಕುಳಿತು ಫೇವರಿಟ್ ಮ್ಯೂಸಿಕ್ ಕೇಳೋದು, ಕಾಫಿ ಕುಡಿಯೋದು ಅಥವಾ ನಕ್ಕು ನಕ್ಕು OTT series ನೋಡುವುದೂ ಒಂದು ಥೆರಪಿ. ಈ ಸಮಯದಲ್ಲಿ ನಾವು ಯಾರ ಬಗ್ಗೆನೂ ಯೋಚಿಸಲ್ಲ. ನಾವು ನಾವಾಗಿರುವ ಟೈಮ್.
Lazy day ಅನ್ನೋದನ್ನು “time waste” ಅಂತ ಯೋಚಿಸೋ ಬದಲು, “mind & body recharge day” ಅಂತ ಪರಿಗಣಿಸಿ. ಆಲಸ್ಯವೂ ಒಮ್ಮೆ ಒಳ್ಳೆ ಅನುಭವ ಕೊಡುವ ಔಷಧಿ!