ಜೀವನದಲ್ಲಿ ಕೆಲವೊಮ್ಮೆ ನಾವು ಎಷ್ಟೇ ಶ್ರಮಪಟ್ಟರೂ ನಮಗೆ ಬೇಕಾದ, ನಾವು ಆಸೆಪಟ್ಟ ಯಶಸ್ಸು ಸಿಗೋದಿಲ್ಲ. ನಿರಂತರ ಪರಿಶ್ರಮ, ಸ್ಪಷ್ಟ ಗುರಿ ಇದ್ದರೂ, ಗೆಲುವು ದೂರವಾಗಿರುತ್ತದೆ. ಈ ಸಮಯದಲ್ಲಿ ನಾವು ಹತಾಶೆಗೂ ಒಳಗಾಗುತ್ತೇವೆ. “ನಾನು ವಿಫಲ ವ್ಯಕ್ತಿ” ಎಂಬ ಭಾವನೆ ನಮ್ಮ ಮನಸ್ಸನ್ನು ಆವರಿಸುತ್ತೆ. ಆದರೆ, ಕೆಲವೊಮ್ಮೆ ಸಮಸ್ಯೆ ನಮ್ಮ ಹೊರಗಿನ ಪರಿಸ್ಥಿತಿಗಳಲ್ಲ, ನಿಜವಾಗಿ ನಮ್ಮ ಒಳಗಿನ ಕೆಲವು ಯೋಚನೆಗಳು.
ತಪ್ಪು ದಿನಚರಿಗಳು ಮತ್ತು ಮಾನಸಿಕ ಅಭ್ಯಾಸಗಳು ನಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು ಎಂಬುದನ್ನು ತಜ್ಞರು ಈಗ ನಿರ್ಣಾಯಕವಾಗಿ ಒತ್ತಿಹೇಳುತ್ತಿದ್ದಾರೆ. ಇವುಗಳಲ್ಲಿ ಕೆಲವನ್ನೇ ತ್ಯಜಿಸಿದರೂ, ನೀವು ಸಾಧನೆಯ ಹಾದಿಯಲ್ಲಿ ಮುನ್ನಡೆಯಬಹುದು.
ಸೋಲಿನ ಭಯ ಮತ್ತು ನಕಾರಾತ್ಮಕ ಯೋಚನೆಗಳು:
ಸೋಲು ಜೀವನದ ಒಂದು ಭಾಗ. ಆದರೆ ಕೆಲವರು ಸೋತೊಡನೆ ಸಂಪೂರ್ಣ ನಿರಾಸೆಗೂ ಒಳಗಾಗುತ್ತಾರೆ. ಅವರು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾರೆ, ತಾವು ಹಿಂದಿನ ತಪ್ಪುಗಳ ಕುರಿತು ಹೆಚ್ಚು ಯೋಚಿಸುತ್ತಾರೆ. ಇಂತಹ ನಕಾರಾತ್ಮಕ ಯೋಚನೆಗಳು ಮುಂದಿನ ಪ್ರಯತ್ನಗಳಿಗೆ ತಡೆ ಹಾಕುತ್ತವೆ.
ಸ್ಪಷ್ಟ ಗುರಿ ಇಲ್ಲದಿರುವುದು:
ಸ್ಪಷ್ಟ ಗುರಿಯಿಲ್ಲದೆ ಸಾಗುತ್ತಿರುವವರು ಸಾಮಾನ್ಯವಾಗಿ ದಿಕ್ಕು ತಪ್ಪುತ್ತಾರೆ. ಗುರಿ ಇಲ್ಲದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ ಯಶಸ್ಸು ದೂರವಾಗುತ್ತದೆ.
ಸಮಯ ನಿರ್ವಹಣೆಯ ಕೊರತೆ:
ಯಶಸ್ಸಿಗೆ ಉತ್ತಮ ಸಮಯ ನಿರ್ವಹಣೆ ಹಾಗೂ ಆದ್ಯತೆಯ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿದೆ. ನಿಮ್ಮ ಕಾರ್ಯಗಳಿಗೆ ನೀವು ಆದ್ಯತೆ ನೀಡದಿದ್ದಾಗ ಅಥವಾ ನಿಮ್ಮ ಸಮಯವನ್ನು ಸಮರ್ಥವಾಗಿ ಬಳಸದಿದ್ದಾಗ, ಸೋಲು ನಿಮ್ಮನ್ನು ಕಾಡುತ್ತದೆ. ಸಮಯ ನಿರ್ವಹಣೆ ಕೌಶಲ್ಯ ಹೆಚ್ಚಿಸಲು ಕ್ಯಾಲೆಂಡರ್ ಹಾಗೂ ಆದ್ಯತೆ ನೀಡಬೇಕಾದ ಕೆಲಸಗಳನ್ನು ನಿರ್ಧರಿಸಿ. ಪ್ರಾಮುಖ್ಯತೆಯ ಆಧಾರದ ಮೇಲೆ ಕಾರ್ಯಗಳಿಗೆ ಆದ್ಯತೆ ನೀಡಿ.
ದೈಹಿಕ ಆರೋಗ್ಯದ ನಿರ್ಲಕ್ಷ್ಯ:
ನಿಮ್ಮ ದೈಹಿಕ ಯೋಗಕ್ಷೇಮವು ನಿಮ್ಮ ಒಟ್ಟಾರೆ ಜೀವನ ತೃಪ್ತಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ಆಯಾಸ, ಒತ್ತಡ ಮತ್ತು ಉತ್ಪಾದಕತೆ ಕಡಿಮೆಯಾಗಬಹುದು.
ನಿರಂತರ ಕಲಿಕೆಯ ಕೊರತೆ:
ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಹೊಸದನ್ನು ಕಲಿಯದೆ ಇರುವುದು ಅಪಾಯಕಾರಿ. ವೈಯಕ್ತಿಕ ಬೆಳವಣಿಗೆ, ಹೊಸ ಕೌಶಲ್ಯಗಳ ಅಭ್ಯಾಸ ಈ ಜಗತ್ತಿನಲ್ಲಿ ನಿಮ್ಮನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ.
ಯಾವುದೇ ಹೊರಗಿನ ಅಡ್ಡಿಗಳಿಗಿಂತ, ನಿಮ್ಮ ಅಂತರಂಗದಲ್ಲಿರುವ ತಪ್ಪು ಅಭ್ಯಾಸಗಳು ಹೆಚ್ಚು ಅಪಾಯಕಾರಿಯಾಗಿರಬಹುದು. ನಿಮ್ಮ ಜೀವನವನ್ನು ಪುನರ್‌ವಿಮರ್ಶಿಸಿ. ಏನು ಬದಲಾವಣೆ ಬೇಕು ಎಂಬುದನ್ನು ಗಮನಿಸಿ. ಈ ಬದಲಾವಣೆಯೇ ನಿಮ್ಮ ಮುಂದಿನ ಯಶಸ್ಸಿನ ದಾರಿಯ ಆರಂಭವಾಗಬಹುದು.