ಜೀವನದಲ್ಲಿ ಮುಂದೆ ಬರಬೇಕು, ಯಶಸ್ವಿಯಾಗಬೇಕು ಮತ್ತು ಸಂತೋಷದಿಂದ ಬದುಕಬೇಕು ಎನ್ನುವುದು ಎಲ್ಲರ ಆಸೆ. ಆದರೆ ಅದಕ್ಕೆ ಕೇವಲ ಕನಸು ಕಂಡ್ರೆ ಸಾಕಾಗಲ್ಲ, ಕೆಲ ಶಕ್ತಿಯುತ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಬದಲಾವಣೆ ಸಾಧ್ಯ.
- ಸಾವಧಾನತೆಯ ಅಭ್ಯಾಸ (Mindfulness): ದಿನನಿತ್ಯದ ಗಡಿಬಿಡಿಯಲ್ಲಿ ನಾವು ಪ್ರಸ್ತುತ ಕ್ಷಣವನ್ನು ಮರೆಯುತ್ತೇವೆ. ಧ್ಯಾನ, ಯೋಗ ಅಥವಾ ಕೆಲಸ ಮಾಡುವಾಗ ಸಂಪೂರ್ಣವಾಗಿ ತೊಡಗಿಕೊಳ್ಳುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಇದು ಭವಿಷ್ಯವನ್ನು ಬಲಪಡಿಸಲು ಸಹಾಯಮಾಡುತ್ತದೆ.
- ಕೃತಜ್ಞತೆ ಬೆಳೆಸಿಕೊಳ್ಳುವುದು (Gratitude) :ಜೀವನದಲ್ಲಿ ಸಿಕ್ಕ ಸಣ್ಣ ಸಣ್ಣ ಒಳ್ಳೆಯ ಸಂಗತಿಗಳಿಗೆ ಧನ್ಯವಾದ ಹೇಳುವ ಅಭ್ಯಾಸ ನಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ. ಇದು ಸಂಬಂಧಗಳನ್ನು ಗಟ್ಟಿಗೊಳಿಸಿ, ಆರೋಗ್ಯ ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ.
- ಹೊಸದನ್ನು ಕಲಿಯುವ ಹಂಬಲ (Learning Habit): ಪ್ರತಿದಿನ ಪುಸ್ತಕ ಓದುವುದು, ಹೊಸ ಕೌಶಲ್ಯ ಕಲಿಯುವುದು ಅಥವಾ ಪಾಡ್‌ಕಾಸ್ಟ್‌ಗಳನ್ನು ಕೇಳುವುದು ನಮ್ಮ ಚಿಂತನೆಯನ್ನು ವಿಸ್ತರಿಸುತ್ತದೆ. ಇದು ವೃತ್ತಿಜೀವನಕ್ಕೂ, ವೈಯಕ್ತಿಕ ಬೆಳವಣಿಗೆಗೂ ಮಾರ್ಗದರ್ಶಿಯಾಗುತ್ತದೆ.
- ಸ್ವಯಂ ಕಾಳಜಿ (Self-care): ಸ್ವಯಂ ಆರೈಕೆ ಸ್ವಾರ್ಥವಲ್ಲ, ಅದು ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ವಿಶ್ರಾಂತಿ, ಪ್ರಕೃತಿಯಲ್ಲಿ ಸಮಯ ಕಳೆಯುವುದು, ಅಥವಾ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರಿಂದ ದೇಹ-ಮನಸ್ಸು ಆರೋಗ್ಯಕರವಾಗಿರುತ್ತದೆ.
- ಗುರಿಗಳನ್ನು ಹೊಂದುವುದು (Goals): ಗುರಿಗಳನ್ನು ಕೇವಲ ಸಾಧನೆಗಾಗಿ ಅಲ್ಲ, ಜೀವನದ ಮೌಲ್ಯಗಳೊಂದಿಗೆ ಹೊಂದುವಂತೆ ಹೊಂದಿಸಿದಾಗ ಅವು ಶಕ್ತಿಯುತ ಪ್ರೇರಣೆಯಾಗುತ್ತವೆ. ಇದು ಯಶಸ್ಸಿನ ದಾರಿಗೆ ದಿಕ್ಕುನೀಡುತ್ತದೆ.