ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಎಲ್ಲಾ ಥರದವರಿಗೂ ಜೀವನ ಇದೆ. ಶ್ರೀಮಂತರಿಗೆ ದುಡ್ಡು ಖರ್ಚು ಮಾಡೋಕೆ ಸಾಕಷ್ಟು ದಾರಿ ಇದೆ. ಹಾಗೆ ಬಡವರಿಗೆ ಬದುಕೋಕೆ ಬೇಕಾದ ವ್ಯವಸ್ಥೆ ಕೂಡ ಇದೆ. ಇಷ್ಟು ದಿನ ನೆಮ್ಮದಿಯಾಗಿದ್ದ ಮಧ್ಯಮ ವರ್ಗದ ಜನರಿಗೆ ಸರ್ಕಾರ ಶಾಕ್ ಮೇಲೆ ಶಾಕ್ ನೀಡಿದೆ. ಬೆಂಗಳೂರು ಬದುಕು ದುಬಾರಿಯಾಗಿದ್ದು, ನಾಳೆಯಿಂದ ಎಲ್ಲ ದರ ಹೆಚ್ಚಾಗಲಿದೆ.
ಯಾವುದೆಲ್ಲಾ ಏರಿಕೆ?
ಹಾಲು: ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ
ಮೊಸರು: ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿದೆ. ಇದರಿಂದ ಹೋಟೆಲ್‌ನಲ್ಲಿ ಕಾಫಿ, ಟೀ ಸದ್ಯದಲ್ಲೇ ಏರಿಕೆ ಸಾಧ್ಯತೆಯಿದೆ.
ವಿದ್ಯುತ್: ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ, ಅಲ್ಲದೇ ಮಾಸಿಕ ಶುಲ್ಕ 20 ರೂ. ಹೆಚ್ಚಳ, ಇದರಿಂದ 120 ರೂ. ಇದ್ದ ನಿಗದಿತ ಶುಲ್ಕ 140 ರೂ.ಗಳಿಗೆ ಏರಿಕೆಯಾಗಿದೆ.
ಕಸ ಸಂಗ್ರಹ ವಸತಿ ಕಟ್ಟಡ:
600 ಚದರಡಿವರೆಗೆ – 10 ರೂ., 601-1000 ಚದರಡಿ – 50 ರೂ., 1001-2000 ಚದರಡಿ – 100 ರೂ., 2001-3000 ಚದರಡಿ – 150 ರೂ., 3001-4000 ಚದರಡಿ – 200 ರೂ., 4000 ಚದರಡಿ ಮೇಲ್ಪಟ್ಟು – 400 ರೂ.
ವಾಣಿಜ್ಯ ಕಟ್ಟಡ:
ನಿತ್ಯ 5ಕೆಜಿವರೆಗೆ – 500 ರೂ. ನಿತ್ಯ 10 ಕೆಜಿವರೆಗೆ – 1400 ರೂ. ನಿತ್ಯ 25 ಕೆಜಿವರೆಗೆ – 3500 ರೂ. ನಿತ್ಯ 50 ಕೆಜಿವರೆಗೆ – 7000 ರೂ., ನಿತ್ಯ 100 ಕೆಜಿವರೆಗೆ – 14000 ರೂ.