ನಮ್ಮ ಜೀವನದಲ್ಲಿ ಪ್ರತಿದಿನ ಎದ್ದಾಗಲೂ ಎಷ್ಟು ಕೃತಜ್ಞರಾಗಿ ಇರುತ್ತೇವೆ. ಇನ್ನೊಂದು ದಿನ ಬದುಕಲು ಅವಕಾಶ ನೀಡಿದ ದೇವರಿಗೆ ವಂದಿಸಿ ದಿನ ಆರಂಭಿಸುತ್ತೇವೆ. ಬೆಳಗ್ಗೆ ನಾವು ಮಾಡುವ ಕೆಲಸಗಳಿಂದ ನಮ್ಮದಿನ ಹೇಗಿರುತ್ತದೆ ಎಂದು ಅಂದಾಜಿಸಬಹುದು. ಬೆಳಗಿನ ಅಭ್ಯಾಸಗಳನ್ನು ಬದಲಾಯಿಸುವುದರಿಂದ ಏನೆಲ್ಲಾ ಬದಲಾವಣೆ ಕಾಣಲಿದೆ. ನೋಡಿ…
- ಮೊದಲು ಅಲಾರಾಂ ಆಫ್ ಮಾಡುವುದನ್ನು ಕಲಿಯಿರಿ. ಅಲಾರಾಂನ್ನು ಅದೆಷ್ಟು ಬಾರಿ ಸ್ನೂಜ್‌ಗೆ ಹಾಕಿ ಇನ್ನು ಹತ್ತು ನಿಮಿಷ ದೂಡಿಲ್ಲ. ಈ ಅಭ್ಯಾಸ ಬಿಟ್ಟುಬಿಡಿ. ಸರಿಯಾದ ಸಮಯಕ್ಕೆ ಏಳಿ.
- ಅದೇ ಹತ್ತು ನಿಮಿಷದಲ್ಲಿ ಪಾಸಿಟಿವ್ ಆಲೋಚನೆಗಳು ಇರುವ ಪುಸ್ತಕವನ್ನು ಓದಿ.. ನಿಮ್ಮ ಆಲೋಚನೆಗಳಿಗೆ ರೆಕ್ಕೆ ಪುಕ್ಕ ಸಿಗುತ್ತದೆ.
- ಇವತ್ತು ನಾನು ಏನೆಲ್ಲಾ ಮಾಡಬೇಕು? ಎಷ್ಟು ಹೊತ್ತಿಗೆ ಮಾಡಬೇಕು. ನಿಮ್ಮ ದಿನವನ್ನು ನೀವೇ ಪ್ಲಾನ್ ಮಾಡಿ.
- ಬಾಗಿಲು, ಕಿಟಕಿ ಎಲ್ಲವನ್ನೂ ತೆರೆದು ಫ್ರೆಶ್ ಗಾಳಿ ಒಳಗೆ ಬರಲು ಬಿಡಿ. ಮಲಗಿದ್ದ ಹಾಸಿಗೆ ಸರಿ ಮಾಡಿ, ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿ.
- ಸಣ್ಣಮಟ್ಟಿಗಿನ ವ್ಯಾಯಾಮ ಬಿಸಿ ನೀರು ಇರಲೇಬೇಕು.
- ಪ್ರತಿ ದಿನ ಒಂದೇ ಸಮಯಕ್ಕೆ ಎದ್ದೇಳಿ. ರಜೆ ಇದೆ, ಹಬ್ಬ ಇದೆ ಎಂದು ಬೇರೆ ಸಮಯಕ್ಕೆ ಏಳಬೇಡಿ. ದಿನವೂ ಒಂದನ್ನೇ ರೂಢಿ ಮಾಡಿ.
- ನಿಮ್ಮ ತಿಂಡಿ ನೀವೇ ತಯಾರಿಸಿ. ಬೆಳಗ್ಗೆಯೇ ಎದ್ದು ಬಿಸಿ ನೀರ ಸ್ನಾನ ಮಾಡಿ, ನಿಮಗಾಗಿ ಆರೋಗ್ಯಕರವಾದ ತಿಂಡಿ ಮಾಡಿ.
- ಮಾಡಿದ್ದ ತಿಂಡಿಯನ್ನು ಬಾಕ್ಸ್‌ಗೆ ಹಾಕೋದು, ಯಾವಾಗಲೋ ತಿನ್ನುವುದು ಮಾಡಬೇಡಿ. ಬಿಸಿಯಾದ ಆಹಾರ ನೆಮ್ಮದಿಯಿಂದ ಸೇವಿಸಿ.
- ಮನೆಯವರ ಜತೆ ಸ್ವಲ್ಪವಾದರೂ ಸಮಯ ಕಳೆಯಿರಿ. ತಾಯಿಗೆ ತಿಂಡಿ ಮಾಡಲು ಈರುಳ್ಳಿ ಹೆಚ್ಚುವುದೋ, ತಂದೆ ಜೊತೆ ಕುಳಿತು ಕಾಫಿ ಕುಡಿಯುವುದೋ ಹೀಗೆ ಸಣ್ಣ ಪುಟ್ಟ ಕೆಲಸವಾದರೂ ಮಾಡಿ ಅವರೊಂದಿಗೆ ಸಮಯ ಕಳೆಯಿರಿ.