April 11, 2026
Saturday, April 11, 2026
spot_img

LIFE | ಜೀವನ ಯಾವತ್ತೂ ನಮ್ಮ ಪ್ಲಾನ್ ಪ್ರಕಾರ ನಡೆಯೋದಿಲ್ಲ….

“ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ… ನಮಗೆ ನಿಮಗೆ ಯಾಕೆ ಟೆನ್ಶನ್ನು…”

ಈ ಹಾಡಿನ ಸಾಲು ಕೇಳಿದಾಗ ಒಂದಿಷ್ಟು ನಗು ಬರುತ್ತೆ. ಆದರೆ ಅದರೊಳಗೆ ಜೀವನದ ದೊಡ್ಡ ಸತ್ಯವೂ ಅಡಗಿದೆ. ನಾವು ಎಷ್ಟು ಪ್ಲಾನ್ ಮಾಡಿಕೊಂಡರೂ, ಮೇಲೆ ಕೂತವನು ನಮ್ಮ ಜೀವನವನ್ನು ತನಗೆ ಸರಿ ತೋರಿದ ದಾರಿಯಲ್ಲಿ ಸಾಗಿಸುತ್ತಾನೆ. ಕೆಲವೊಮ್ಮೆ ನಾವು ಕಟ್ಟಿಕೊಂಡ ಕನಸುಗಳು ಬೇರೆ ದಿಕ್ಕಿಗೆ ಹೋಗುತ್ತವೆ, ನಾವು ನಿರೀಕ್ಷಿಸದ ಘಟನೆಗಳು ನಮ್ಮ ಮುಂದೆ ನಿಂತುಕೊಳ್ಳುತ್ತವೆ.

ಒಂದು ಕೆಲಸ, ಒಂದು ಸಂಬಂಧ, ಒಂದು ಗುರಿ ಎಲ್ಲವೂ ನಮ್ಮ ಲೆಕ್ಕದಲ್ಲಿ ಸರಿಯಾಗಿರಬಹುದು. ಆದರೆ ಜೀವನಕ್ಕೆ ತನ್ನದೇ ಲೆಕ್ಕ ಇರುತ್ತದೆ. ನಾವು ಹಿಡಿದ ದಾರಿಯಲ್ಲಿ ಕೆಲವೊಮ್ಮೆ ಅಡ್ಡಿಗಳು ಬರುತ್ತವೆ, ಕೆಲವೊಮ್ಮೆ ಅಚ್ಚರಿಯ ತಿರುವುಗಳು ಬರುತ್ತವೆ. ಅದನ್ನೇ ಜೀವನದ ಆಟ ಅಂತ ಹೇಳಬಹುದು.

ಇದನ್ನೂ ಓದಿ:

ಸಮಸ್ಯೆ ಪ್ಲಾನ್ ಮಾಡುವುದಲ್ಲ, ಅದೇ ಪ್ಲಾನ್ ಆಗಲೇಬೇಕು ಅನ್ನೋ ಹಠದಲ್ಲಿ ಇದೆ. ಕೆಲವೊಮ್ಮೆ ನಾವು ಬಯಸಿದದ್ದು ಆಗೋದಿಲ್ಲ. ಆಗ ನಿರಾಶೆ, ಟೆನ್ಶನ್, ಬೇಸರ ಸಹಜ. ಆದರೆ ಹಿಂದೆ ತಿರುಗಿ ನೋಡಿದಾಗ, ಆಗ ನಡೆದದ್ದೇ ನಮ್ಮ ಒಳ್ಳೆಯದಕ್ಕಾಗಿತ್ತು ಅನ್ನೋದು ಅರ್ಥವಾಗುತ್ತದೆ.

ಜೀವನ ಯಾವತ್ತೂ ನಮ್ಮ ಯೋಜನೆಯಂತೆ ನಡೆಯೋದಿಲ್ಲ. ಆದರೆ ಅದೇ ಅದರ ಸೌಂದರ್ಯ ಕೂಡ. ಯಾಕೆಂದರೆ ಅನಿರೀಕ್ಷಿತ ತಿರುವುಗಳೇ ನಮಗೆ ಹೊಸ ಪಾಠ, ಹೊಸ ದಾರಿ, ಹೊಸ ವ್ಯಕ್ತಿತ್ವ ಕೊಡುತ್ತವೆ.

ಹೀಗಾಗಿ ಪ್ರತಿಯೊಂದು ವಿಷಯವನ್ನೂ ನಿಯಂತ್ರಿಸಲು ಯತ್ನಿಸಬೇಡಿ. ಸ್ವಲ್ಪ ಜೀವನದ ಮೇಲೆ ನಂಬಿಕೆ ಇಡಿ. ಕೆಲವೊಮ್ಮೆ ನಾವು ಬಯಸಿದ ದಾರಿ ಸಿಗೋದಿಲ್ಲ… ಆದರೆ ಜೀವನ ನಮಗೆ ಬೇಕಾದ ದಾರಿಯನ್ನೇ ತೋರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !