ನಾವು ಸಾಮಾನ್ಯವಾಗಿ “Self love” ಅಂದರೆ ಸ್ವಾರ್ಥ ಅಂತ ತಪ್ಪಾಗಿ ಅರ್ಥ ಮಾಡ್ಕೊಳ್ಳ್ತೀವಿ. ಆದರೆ ನಿಜವಾಗಿಯೂ self love ಅಂದ್ರೆ ನಮ್ಮನ್ನು ನಾವು ಅರ್ಥಮಾಡ್ಕೊಳ್ಳೋದು, ನಮ್ಮ ಭಾವನೆಗಳಿಗೆ ಗೌರವ ಕೊಡೋದು, ನಮ್ಮನ್ನು ನಾವು ಕಾಪಾಡ್ಕೊಳ್ಳೋದು. ಇದು ಹೊರಗಿನ ಜಗತ್ತಿಗಿಂತ ಮೊದಲು ನಮ್ಮ ಒಳಗಿನ ಜಗತ್ತನ್ನು ಸರಿಪಡಿಸೋ ಒಂದು ಪ್ರಯಾಣ.
Self love ಕಲಿತ್ಮೇಲೆ ಮೊದಲಿಗೆ ಬದಲಾಗೋದು ನಮ್ಮ ಆಲೋಚನೆ. ಮೊದಲು ಸಣ್ಣ ತಪ್ಪು ಮಾಡಿದ್ರೂ ನಾವು ನಮ್ಮನ್ನೇ ದೂಷಿಸಿಕೊಳ್ತೇವೆ. ಆದರೆ self love ಇದ್ದಾಗ, “ತಪ್ಪು ಮಾಡೋದು ಸಹಜ” ಅಂತ ಮನಸ್ಸಿಗೆ ಹೇಳ್ಕೊಳ್ತೀವಿ. ಇದರಿಂದ ಒಳಗಿನ ಒತ್ತಡ ಕಡಿಮೆಯಾಗುತ್ತೆ.
ಅದಾದ್ಮೇಲೆ ನಮ್ಮ ಸಂಬಂಧಗಳೂ ಬದಲಾಗುತ್ತೆ. ಮೊದಲು ಯಾರಾದರೂ ನಮ್ಮನ್ನು ನೋಯಿಸಿದ್ರೂ ಸಹಿಸ್ಕೊಂಡು, “ನಾನು ತಪ್ಪಾ?” ಅಂತ ಯೋಚಿಸ್ತಿದ್ದೆವು. Self love ಬಂದ್ಮೇಲೆ, ನಮಿಗೆ ನೋವಾಗೋ ಜಾಗದಿಂದ ಎದ್ದು ಬರೋದನ್ನು ಕಲೀತಿವಿ. ಯಾರು ನಮಗೆ ಸರಿಯಾಗಿಲ್ಲ ಅಂದ್ರೆ, ದೂರ ಇರೋ ಧೈರ್ಯ ಬರುತ್ತೆ.
ಇದನ್ನೂ ಓದಿ:
Self love ನಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ನಾವು ನಮ್ಮನ್ನೇ ಒಪ್ಪಿಕೊಂಡಾಗ, ಇತರರ ಒಪ್ಪಿಗೆ ಬೇಕೆಂಬ ಹಂಬಲ ನಿಧಾನವಾಗಿ ಕಡಿಮೆಯಾಗುತ್ತೆ. “ನಾನು ಸಾಕು” ಅನ್ನೋ ಭಾವನೆ ಬಂದ್ಮೇಲೆ, ಜೀವನದಲ್ಲಿ ಎಷ್ಟೇ ಸವಾಲು ಬಂದರೂ ನಿಂತುಕೊಳ್ಳೋ ಶಕ್ತಿ ಬರುತ್ತೆ.
ಹೆಚ್ಚಾಗಿ ಗಮನಿಸೋ ಒಂದು ಬದಲಾವಣೆ ಅಂದ್ರೆ ಮನಸ್ಸಿನ ಶಾಂತಿ. ಎಲ್ಲರನ್ನೂ ಖುಷಿಪಡಿಸೋ ಹೊಣೆಗಾರಿಕೆಯಿಂದ ಹೊರಬಂದಾಗ, ನಾವು ನಮ್ಮ ಜೀವನದ ಕಡೆ ಗಮನ ಕೊಡೋಕೆ ಶುರು ಮಾಡ್ತೀವಿ. ನಮ್ಮ ಇಷ್ಟದ ಕೆಲಸ, ನಮ್ಮ ಕನಸು, ನಮ್ಮ ಸಂತೋಷ… ಇವುಗಳಿಗೇ ಪ್ರಾಮುಖ್ಯತೆ ಕೊಡ್ತೀವಿ.
Self love ಕಲಿತ್ಮೇಲೆ ಜೀವನ ಒಂದೇ ದಿನದಲ್ಲಿ ಬದಲಾಗೋದಿಲ್ಲ. ಆದರೆ ನಿಧಾನವಾಗಿ ನಮ್ಮ ಯೋಚನೆ, ನಮ್ಮ ಮಾತು, ನಮ್ಮ ನಡೆ ಎಲ್ಲವೂ ಬದಲಾಗುತ್ತಾ ಹೋಗುತ್ತೆ. ಕೊನೆಗೆ, ಹೊರಗಿನ ಪರಿಸ್ಥಿತಿ ಹೇಗೇ ಇದ್ದರೂ, ಒಳಗೆ ಒಂದು ನೆಮ್ಮದಿ ನೆಲೆಸುತ್ತೆ. ಅಷ್ಟೇ self love ನ ನಿಜವಾದ ಮ್ಯಾಜಿಕ್.



