Wednesday, September 24, 2025

LIFE | ಜೀವನದಲ್ಲಿ ಸಿಂಗಲ್ ಆಗಿರೋರ ಅಭ್ಯಾಸಗಳು ಹೀಗಿರುತ್ತಂತೆ! ಹೌದಾ?

ಮನುಷ್ಯನು ಮೂಲತಃ ಸಂಘಜೀವಿ. ಆದರೆ ಪ್ರತಿಯೊಬ್ಬರಿಗೂ ಭಾವನೆಗಳನ್ನು ಹಂಚಿಕೊಳ್ಳಲು ಸಂಗಾತಿ ಸಿಗುವುದಿಲ್ಲ. ಸಂಗಾತಿಯಿಲ್ಲದೆ ಬದುಕುವವರು ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಿಕೊಂಡು ಹೋಗುತ್ತಾರೆ. ಇದರಿಂದ ಕೆಲವೊಮ್ಮೆ ಕಷ್ಟವಾದರೂ, ಅವರು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಂಡು ದೃಢತೆ ಮತ್ತು ಸ್ಥಿರತೆಯನ್ನು ಗಳಿಸುತ್ತಾರೆ.

ಆಲೋಚನೆಗಳು ಮತ್ತು ಭಾವನೆಗಳ ಮೇಲೆ ಕೇಂದ್ರೀಕರಣ:
ಸಂಗಾತಿಯಿಲ್ಲದವರು ತಮ್ಮ ಒತ್ತಡ ಮತ್ತು ದುಃಖವನ್ನು ಹಂಚಿಕೊಳ್ಳಲು ಬದಲಿಗೆ, ಯೋಚನೆ, ಬರವಣಿಗೆ, ಉಸಿರಾಟಾಭ್ಯಾಸ ಅಥವಾ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಮನಸ್ಸಿಗೆ ಶಾಂತಿ ತರಲು ಪ್ರಯತ್ನಿಸುತ್ತಾರೆ.

ಸ್ಥಿರ ದಿನಚರಿ ನಿರ್ಮಾಣ:
ಒಬ್ಬಂಟಿಯಾಗಿ ಬದುಕುವವರು ವ್ಯಾಯಾಮ, ಸರಿಯಾದ ಆಹಾರ, ಪುಸ್ತಕ ಓದು, ಸುತ್ತಾಟ ಮುಂತಾದ ಸ್ಥಿರ ದಿನಚರಿಗಳನ್ನು ಪಾಲಿಸುತ್ತಾರೆ. ಇದು ಅವರಿಗೆ ಭಾವನಾತ್ಮಕ ಸಮತೋಲನ ನೀಡುತ್ತದೆ.

ಸ್ನೇಹ ಮತ್ತು ಕೆಲಸದಲ್ಲಿ ತೊಡಗಿಸಿಕೊಳ್ಳುವುದು:
ಸಂಗಾತಿಯ ಕೊರತೆಯನ್ನು ಭರಿಸಲು ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಜೊತೆಗೆ ಕೆಲಸದಲ್ಲಿ ಬ್ಯುಸಿಯಾಗಿರಲು ಪ್ರಯತ್ನಿಸುತ್ತಾರೆ.

ಅತಿಯಾದ ಸ್ವಾತಂತ್ರ್ಯ:
ಕೆಲವರು ಸಂಗಾತಿ ಇಲ್ಲದ ಕಾರಣಕ್ಕೆ ಅತಿಯಾಗಿ ಸ್ವತಂತ್ರರಾಗುತ್ತಾರೆ. ಇದರಿಂದ ಸಹಾಯ ಕೇಳಲು ಹಿಂಜರಿಯುವ ಅಥವಾ ಇತರರನ್ನು ನಂಬದ ಗುಣ ಬೆಳೆಯಬಹುದು ಆದರೆ ಅವರ ಲೆಕ್ಕದಲ್ಲಿ ಇದು ಒಳ್ಳೆಯದೇ.

ಪರ್ಯಾಯ ಆಧಾರ:
ಸಾಕುಪ್ರಾಣಿಗಳು, ಆನ್‌ಲೈನ್ ಸಮುದಾಯಗಳು ಅಥವಾ ಸ್ನೇಹಿತರೊಡನೆ ಭಾವನೆಗಳನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ.

ಇದನ್ನೂ ಓದಿ