LIFE | ನಿಜವಾಗಿ ಸಂತೋಷವಾಗಿರುವವರು ಬೆಳಗ್ಗೆ ಫಾಲೋ ಮಾಡೋ ಅಭ್ಯಾಸಗಳಿವು! ನೀವೂ ಇವತ್ತಿನಿಂದ್ಲೇ ಶುರುಮಾಡಿ

ಬೆಳಗಿನ ಸಮಯವೇ ಇಡೀ ದಿನದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಕ್ಷಣ. ಚೈತನ್ಯಭರಿತ ಜೀವನವನ್ನು ನಡೆಸುತ್ತಿರುವವರು ಬೆಳಿಗ್ಗೆ ಸುಮ್ಮನೆ ಎದ್ದು ಕೆಲಸ ಆರಂಭಿಸುವುದಿಲ್ಲ. ಬದಲಾಗಿ ಕೆಲ ಮಹತ್ವದ ಅಭ್ಯಾಸಗಳನ್ನು ಪಾಲಿಸುತ್ತಾರೆ. ಇವು ಅವರನ್ನು ದೈನಂದಿನ ಬದುಕಿನಲ್ಲಿ ಹೆಚ್ಚು ಉತ್ಸಾಹದಿಂದ, ಸಮಾಧಾನದಿಂದ ಮುನ್ನಡೆಸುತ್ತವೆ.

How to Wake Up Early (and Why You May Want to Start)

ಉದ್ದೇಶದೊಂದಿಗೆ ದಿನದ ಪ್ರಾರಂಭ:
ಸಂತೋಷವಾಗಿರುವವರು ಬೆಳಿಗ್ಗೆ ಎದ್ದ ತಕ್ಷಣವೇ ಫೋನ್ ಅಥವಾ ಟಿವಿಯ ಕಡೆಗೆ ಓದೋದಿಲ್ಲ. ಬದಲಿಗೆ ತಮಗಿಷ್ಟವಾಗಿರುವ ಶಾಂತ ಸಮಯ ಮೀಸಲಿಟ್ಟುಕೊಳ್ಳುತ್ತಾರೆ. ‘ಇವತ್ತು ಏನು ಮಾಡಬೇಕು?’ ಎಂಬ ಉದ್ದೇಶವನ್ನು ಮನಸ್ಸಿನಲ್ಲಿ ತಿರುವಿಸಿ ದಿನವನ್ನು ಪ್ರಾರಂಭಿಸುತ್ತಾರೆ. ಈ ಚಿಕ್ಕ ಚಿಂತನೆಯೇ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ.

How to Wake Up Feeling Refreshed in 10 Ways | Nature Made®

ದೈಹಿಕ ಚಟುವಟಿಕೆಗೆ ಆದ್ಯತೆ:
ವಾಕ್‌, ಯೋಗ ಅಥವಾ ಸಿಂಪಲ್ ವರ್ಕೌಟ್ – ಇವು ಬೆಳಗಿನ ಅನಿವಾರ್ಯ ಭಾಗವಾಗಿರುತ್ತವೆ. ವ್ಯಾಯಾಮ ಮಾತ್ರ ದೇಹವನ್ನಷ್ಟೆ ಅಲ್ಲ, ಮನಸ್ಸನ್ನೂ ತಾಜಾ ಮತ್ತು ನೆಗೇಟಿವಿಟಿಯಿಂದ ಮುಕ್ತವಾಗಿಡುತ್ತದೆ. ಇದು ಒತ್ತಡವನ್ನು ತಗ್ಗಿಸಿ ಸಂತೋಷವನ್ನು ಹೆಚ್ಚಿಸುತ್ತದೆ.

Here's Your Simple Guide To Healthy Post-Workout Habits

ಮೈಂಡ್‌ಫುಲ್‌ನೆಸ್ ಮತ್ತು ಧ್ಯಾನ:
ಸಂತೋಷವಾಗಿರುವವರು ತಮ್ಮ ಒಳಜಗತ್ತಿನ ಶಾಂತಿಗೆ ಎತ್ತರದ ಮೌಲ್ಯ ನೀಡುತ್ತಾರೆ. ಧ್ಯಾನ, ಪ್ರಾರ್ಥನೆ ಅಥವಾ ಗ್ರಾಟಿಟ್ಯೂಡ್ ಪತ್ರ ಬರೆಯುವಂತಹ ಚಟುವಟಿಕೆಗಳ ಮೂಲಕ ಆತ್ಮಸಂವಾದಕ್ಕೆ ಸಮಯ ಮೀಸಲಿಡುತ್ತಾರೆ. ಇದು ಮನಸ್ಸಿನ ಶುದ್ಧತೆಗೆ ಕಾರಣವಾಗುತ್ತದೆ.

Dhyana or Meditation, the 7th limb of Ashtanga Yoga

ಫೋನ್ ಸ್ಕ್ರೋಲ್‌ಗೆ “ನೋ” ಹೇಳುವುದು:
ಅಭಿವೃದ್ಧಿ ಪಥದಲ್ಲಿರುವವರು ಬೆಳಿಗ್ಗೆ ಎದ್ದು ಕೂಡಲೇ ಮೊಬೈಲ್‌ನಲ್ಲಿ ಸ್ಕ್ರೋಲ್ ಮಾಡುವ ಅಭ್ಯಾಸದಿಂದ ದೂರವಿರುತ್ತಾರೆ. ಬದಲಿಗೆ ಜರ್ನಲಿಂಗ್, ಪ್ಲಾನಿಂಗ್ ಅಥವಾ ಮನಸ್ಸಿನ ಅರಿವಿಗೆ ಹೆಚ್ಚಿನ ಜಾಗ ನೀಡುತ್ತಾರೆ. ಈ ಅಭ್ಯಾಸಗಳು ಅವರ ದಿನದ ಗುಣಮಟ್ಟವನ್ನು ಹೆಚ್ಚಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!