ಕೆಲವೊಮ್ಮೆ ನಮ್ಮ ಹಳೆಯ ವರ್ಷನ್ ಬಗ್ಗೆ ನಾವು ನೆನಪಿಸಿಕೊಂಡಾಗ ಒಂದು ಪ್ರಶ್ನೆ ಮನಸ್ಸಿಗೆ ಬರುತ್ತೆ “ನಾನು ಇಷ್ಟು ಬದಲಾಗಿದ್ದು ಹೇಗೆ?” ಒಮ್ಮೆ ಸಣ್ಣ ವಿಷಯಕ್ಕೂ ತುಂಬಾ ಖುಷಿಪಡುತ್ತಿದ್ದ ಮನಸ್ಸು, ಈಗ ಹೆಚ್ಚು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಒಮ್ಮೆ ಯಾರ ಮಾತಿಗೂ ಬೇಗ ನಂಬಿಕೆ ಇಡುವ ಸ್ವಭಾವ, ಈಗ ಸ್ವಲ್ಪ ಎಚ್ಚರಿಕೆಯಿಂದ ನಡೆಯುತ್ತದೆ. ಆಗ ಅನಿಸುತ್ತದೆ… ನಾವು ಬದಲಾಗಿಲ್ಲ, ಜೀವನವೇ ನಮ್ಮನ್ನು ಬದಲಿಸಿದೆ.
ಪ್ರತಿ ಅನುಭವವೂ ನಮ್ಮೊಳಗೆ ಏನಾದರೂ ಒಂದು ಗುರುತು ಬಿಡುತ್ತದೆ. ಕೆಲವು ಕ್ಷಣಗಳು ನಮ್ಮನ್ನು ನಗಿಸುತ್ತವೆ, ಕೆಲವು ಘಟನೆಗಳು ನೋವು ಕೊಡುತ್ತವೆ, ಇನ್ನೂ ಕೆಲವು ಸಂದರ್ಭಗಳು ಗಟ್ಟಿಯಾಗಿ ನಿಲ್ಲೋದು ಕಲಿಸುತ್ತವೆ. ಇದೇ ಎಲ್ಲದರ ನಡುವೆ ನಮ್ಮ ಸ್ವಭಾವ, ಆಲೋಚನೆ, ಆದ್ಯತೆಗಳು ನಿಧಾನವಾಗಿ ಬದಲಾಗುತ್ತವೆ. ಇದು ಒಂದೇ ದಿನದಲ್ಲಿ ಆಗೋದಿಲ್ಲ; ದಿನಗಳು, ಘಟನೆಗಳು, ಪಾಠಗಳು ಸೇರಿ ನಮ್ಮನ್ನು ಹೊಸ ವ್ಯಕ್ತಿಯನ್ನಾಗಿ ರೂಪಿಸುತ್ತವೆ.
ಇದನ್ನೂ ಓದಿ:
ಒಮ್ಮೆ ತುಂಬಾ ಭಾವನಾತ್ಮಕವಾಗಿದ್ದ ಮನಸ್ಸು, ಇಂದು practical ಆಗಿರಬಹುದು. ಮೊದಲು ಎಲ್ಲರನ್ನೂ ಖುಷಿಪಡಿಸಬೇಕೆನ್ನಿಸಿದ್ದರೆ, ಈಗ ನಮ್ಮ ಶಾಂತಿ ಮುಖ್ಯ ಅನ್ನಿಸಬಹುದು. ಇದು ತಪ್ಪಲ್ಲ. ಇದು ಜೀವನ ನಮ್ಮನ್ನು ಬೆಳೆಯುವಂತೆ ಮಾಡುತ್ತಿರುವ ಪ್ರಕ್ರಿಯೆ.
ಹೀಗಾಗಿ ಕೆಲವೊಮ್ಮೆ ಕನ್ನಡಿಯಲ್ಲಿ ನಮ್ಮನ್ನೇ ನೋಡಿಕೊಂಡು “ನಾನು ಮೊದಲಿನಂತಿಲ್ಲ” ಅನ್ನಿಸಿದರೆ, ಅದನ್ನು ನೆಗೆಟಿವ್ ಆಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ನಾವು ಬದಲಾಗಿಲ್ಲ… ಜೀವನ ನಮಗೆ ಕಲಿಸಿದ ಪಾಠಗಳು ನಮ್ಮನ್ನು ಹೊಸ ರೂಪಕ್ಕೆ ತಂದಿವೆ. ಅದೇ ಬೆಳವಣಿಗೆ, ಅದೇ ಜೀವನದ ಸೌಂದರ್ಯ.



