ಬದುಕಿನಲ್ಲಿ ಕೆಲವೊಮ್ಮೆ ಎಲ್ಲವೂ ತಪ್ಪಾಗುತ್ತಿರುವಂತೆ ಅನಿಸಬಹುದು. ಒಂಟಿತನ ಕಾಡಬಹುದು, ಆಪ್ತರು ಕೈ ಬಿಡಬಹುದು, ನಂಬಿಕೆಯೇ ಕಳೆದುಹೋಗಬಹುದು. ಈ ಹೊತ್ತಿನಲ್ಲಿ ಜೀವನವೇ ಬೇಜಾರು ಅನ್ನಿಸುವಂತಹ ಸ್ಥಿತಿಗೆ ನಾವು ತಲುಪಬಹುದು. ಆದರೆ, ಈ ಕಠಿಣ ಕ್ಷಣಗಳಿಗೂ ಒಂದು ಅಂತ್ಯವಿದೆ. ಸಂಕಷ್ಟವೊಂದೇ ಶಾಶ್ವತವಲ್ಲ. ಈ ಸಂದರ್ಭಗಳಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ಕೆಲವು ಮುಖ್ಯವಾದ ಸಲಹೆಗಳನ್ನು ನಾವು ಕೊಡ್ತೇವೆ. ಇವು ನಿಮ್ಮೊಳಗಿನ ಆತ್ಮವಿಶ್ವಾಸವನ್ನು ಹೆಚ್ಚಿಸಲು, ಮತ್ತೆ ಜೀವನದಲ್ಲಿ ಬೆಳಕನ್ನು ಕಾಣಲು ನೆರವಾಗಬಹುದು.
ಇದು ತಾತ್ಕಾಲಿಕ ಅಷ್ಟೇ
ಯಾವುದೂ ಶಾಶ್ವತವಲ್ಲ. ಈ ಕಷ್ಟಗಳು ಕೂಡ ಕಾಲಾವಧಿಗೆ ಮಾತ್ರ ಸೀಮಿತ. ಇವತ್ತಿನ ನೋವು ನಾಳೆ ಮರೆಯಾಗಬಹುದು. ಮುಂದೆ ಸುಖದ ಬೆಳಕು ಕಾಣುವುದು ಖಚಿತ.
ಹಳೆಯ ಗೆಲುವುಗಳನ್ನ ನೆನಪಿಸಿಕೊಳ್ಳಿ
ಬದುಕಿನಲ್ಲಿ ನೀವು ಈಗಾಗಲೇ ಗೆದ್ದ ಕ್ಷಣಗಳಿವೆ. ಆಗ ನೀವೇ ಸೋತಿರಲಿಲ್ಲ, ಈಗ ಯಾಕೆ ಅಂತಃಕರಣ ದುರ್ಬಲ ಮಾಡಿಕೊಳ್ಳಬೇಕು? ಆ ಸುಂದರ ಕ್ಷಣಗಳ ನೆನಪು ನಿಮ್ಮನ್ನು ಪುನಃ ಎಚ್ಚರಿಸುತ್ತದೆ.
ಪ್ರೇರಣೆಯತ್ತ ಗಮನ ಹರಿಸಿ
ನೋವು ಹೆಚ್ಚಾದಾಗ ಅಲ್ಲೇ ತಲೆ ಹಾಕಿಕೊಳ್ಳಬೇಡಿ. ಬದಲಿಗೆ, ಪ್ರೇರಣೆ ನೀಡುವ ವ್ಯಕ್ತಿಗಳ ಮಾತುಗಳು, ಪುಸ್ತಕಗಳು ಅಥವಾ ವಿಡಿಯೋಗಳು ನಿಮ್ಮ ಮನಸ್ಸಿಗೆ ಧೈರ್ಯ ತುಂಬಿಸಬಹುದು.
ಸಣ್ಣ ಗುರಿ ಇಟ್ಟುಕೊಳ್ಳಿ
ಬೇಡದ ಭಾವನೆಗಳಿಂದ ಹೊರ ಬರಲು ದಿನವೂ ಸಣ್ಣ ಗುರಿ ಹೊಂದಿ. ಓದುವದು, ವ್ಯಾಯಾಮ, ಹೊಸದಾಗಿ ಕಲಿಯುವುದು… ಇವು ನಿಮ್ಮ ದಿನಚರೆಯನ್ನು ಗಟ್ಟಿ ಮಾಡುತ್ತವೆ.
ಬೆಂಬಲ ಬೇಕಾಗುತ್ತದೆ
ಮನದಾಳದ ನೋವಿಗೆ ಕೆಲವೊಮ್ಮೆ ಮಾತು ಸಾಕು. ನಂಬಿಕಸ್ಥ ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಸಂವಾದ ಮಾಡಿ. ಇದರಿಂದ ನೀವು ಹಗುರವಾಗಬಹುದು.
ಬದಲಾವಣೆಯನ್ನ ಸ್ವೀಕರಿಸಿ
ಜೀವನ ನಿರಂತರ ಬದಲಾವಣೆಯ ಪ್ರಯಾಣ. ಪ್ರತಿಯೊಂದು ಪರಿವರ್ತನೆಯೂ ನಿಮ್ಮಲ್ಲಿ ಹೊಸ ದೃಷ್ಟಿಕೋನ ತರಬಹುದು. ಅದನ್ನು ತಿರಸ್ಕರಿಸದೆ, ಸ್ವೀಕರಿಸಿ.
ಅನುಭವದಿಂದ ಪಾಠ ಕಲಿಯಿರಿ
ಪ್ರತಿಯೊಂದು ನೋವು ಒಂದು ಪಾಠ. ಈ ಪಾಠಗಳು ನಿಮ್ಮ ಮುಂದಿನ ನಡೆಗೆ ಮಾರ್ಗದರ್ಶಿ ಆಗುತ್ತವೆ. ಅವು ನಿಮ್ಮ ಆತ್ಮಬಲವನ್ನು ಹೆಚ್ಚಿಸುತ್ತವೆ.
ಹೋಲಿಕೆ ನಿಲ್ಲಿಸಿ
ಇತರರೊಂದಿಗೆ ಹೋಲಿಕೆ ಮಾಡುವುದು ಮನಸ್ಸಿಗೆ ಮತ್ತಷ್ಟು ನೋವು ತಂದೀತು. ಬದಲಿಗೆ, ನಿಮ್ಮನ್ನು ನೀವೇ ಹೆಚ್ಚು ಅರಿತುಕೊಳ್ಳಿ. ನಿಮಗಿಂತ ಹೆಚ್ಚಿನ ಕಷ್ಟಗಳು ಮತ್ತೊಬ್ಬರಿಗಿವೆ ಎಂಬುವುದನ್ನು ನೆನಪಿಸಿಕೊಳ್ಳಿ.
ಸ್ಮರಿಸಿರಿ, ಕತ್ತಲಾದ ಇರುಳಿಗೂ ಒಂದು ಬೆಳಕಿನ ಕಿರಣ ಇರುತ್ತದೆ. ನೀವು ಇಲ್ಲಿಯವರೆಗೆ ಬಂದಿದ್ದರೆ, ಮುಂದೆ ಹೋಗುವುದೂ ನಿಮಗೆ ಸಾಧ್ಯವಿದೆ. ಜೀವನ ಸುಂದರವಾಗಿದೆ, ಮತ್ತು ನೀವು ಅದನ್ನು ಉಳಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.