April 10, 2026
Friday, April 10, 2026
spot_img

LIFE | ಜೀವನದಲ್ಲಿ ಎಲ್ಲವೂ ಸರಿಯಾಗೇ ಇದ್ದರೂ ಕೆಲವೊಮ್ಮೆ ಖಾಲಿ ಖಾಲಿ ಅನಿಸೋದ್ಯಾಕೆ?

ಎಲ್ಲವೂ ಇದೆ…
ಕೆಲಸ ಇದೆ, ಮನೆ ಇದೆ, ಜನರ ಜೊತೆ ನಗು ಇದೆ.
ಆದರೂ ಕೆಲವೊಮ್ಮೆ ಮನಸ್ಸು ಕೇಳುತ್ತೆ “ಇದರಲ್ಲಿ ನಿಜವಾಗಿಯೂ ಸಂತೋಷ ಇದೆಯಾ?”

ಇದು ವಿಚಿತ್ರ ಅನ್ನಿಸಬಹುದು. ಏನೂ ತಪ್ಪಾಗಿಲ್ಲ, ಯಾರೂ ನೋವು ಕೊಟ್ಟಿಲ್ಲ, ಜೀವನ ಸರಾಗವಾಗಿಯೇ ಸಾಗುತ್ತಿದೆ. ಆದರೆ ಒಳಗೆ ಏನೋ ಮೌನ ಖಾಲಿತನ. ಹೇಳಿಕೊಳ್ಳಲು ಕಾರಣವೇ ಇಲ್ಲ… ಆದರೂ ಮನಸ್ಸು ಹಗುರವಾಗಿರುವುದಿಲ್ಲ.

ಬಹುಶಃ ನಾವು ತುಂಬಾ ಸಮಯದಿಂದ ಹೊರಗಿನ ಜೀವನ ಕಟ್ಟುತ್ತಾ ಒಳಗಿನ ಜೀವನ ಮರೆತಿದ್ದೇವೆ. ದಿನದ ಕೆಲಸ, ಜವಾಬ್ದಾರಿ, ಸಾಮಾಜಿಕ ಜಾಲತಾಣ ಎಲ್ಲದರ ಮಧ್ಯೆ “ನಾನು ಹೇಗಿದ್ದೀನಿ?” ಅನ್ನೋ ಪ್ರಶ್ನೆ ಕೇಳೋದು ಮರೆತುಬಿಟ್ಟಿದ್ದೇವೆ.

ಕೆಲವೊಮ್ಮೆ ನಾವು ನಮ್ಮ ಭಾವನೆಗಳನ್ನು ಮೂಟೆಕಟ್ಟಿ ಮನಸ್ಸಿನ ಮೂಲೆಗೆ ಬಿಸಾಡಿಬಿಟ್ಟಿದ್ದೇವೆ. ನಗಬೇಕಾದಲ್ಲಿ ನಗುತ್ತೇವೆ, ಬಲವಾಗಿರಬೇಕಾದಲ್ಲಿ ಬಲವಾಗಿರುತ್ತೇವೆ. ಆದರೆ ಆ ನಾಟಕದ ನಡುವೆ ನಿಜವಾದ ಮನಸ್ಸಿಗೆ ಜಾಗ ಸಿಗುವುದಿಲ್ಲ.

ಇದನ್ನೂ ಓದಿ:

ಖಾಲಿತನ ಅಂದ್ರೆ ಏನೋ ಕಳೆದುಹೋಯ್ತು ಅನ್ನೋದಲ್ಲ. ಅದು ಬಹುಶಃ ನಮ್ಮೊಳಗಿನ ಧ್ವನಿ “ಸ್ವಲ್ಪ ನಿನ್ನ ಕಡೆ ಗಮನ ಕೊಡು” ಅನ್ನೋ ಸೂಚನೆ.

ಸ್ವಲ್ಪ ನಿಧಾನವಾಗಿರಿ. ನಿಮ್ಮ ಜೊತೆ ನೀವು ಸಮಯ ಕಳೆಯಿರಿ. ನೀವು ಏನು ಫೀಲ್ ಮಾಡ್ತಿದ್ದೀರೋ ಅದನ್ನು ಒಪ್ಪಿಕೊಳ್ಳಿ. ಎಲ್ಲವೂ ಪರ್ಫೆಕ್ಟ್ ಆಗಿರಬೇಕೆಂಬ ಒತ್ತಡ ಬಿಡಿ.

ಯಾಕೆಂದರೆ ಜೀವನದಲ್ಲಿ ಎಲ್ಲವೂ ಸರಿಯಾಗಿದ್ದರೂ…
ಮನಸ್ಸು ಖಾಲಿ ಅನಿಸಿದರೆ,
ಅದು ಸಮಸ್ಯೆ ಅಲ್ಲ
ಅದು ನಿಮ್ಮೊಳಗೆ ನಿಮಗೆ ನೀವು ಕರೆ ನೀಡುತ್ತಿರುವ ಕ್ಷಣ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !