April 2, 2026
Thursday, April 2, 2026
spot_img

LIFE | ನಿಮ್ಮನ್ನು ನೀವು ಅನುಮಾನಿಸೋದೇ ನಿಮ್ಮ ದೊಡ್ಡ ಶತ್ರು

ಜೀವನದಲ್ಲಿ ನಮ್ಮನ್ನು ಹಿಂದಕ್ಕೆ ತಳ್ಳೋದು ಯಾವಾಗಲೂ ಪರಿಸ್ಥಿತಿಗಳು ಅಥವಾ ಜನರಲ್ಲ. ಹಲವಾರು ಬಾರಿ ನಮ್ಮ ಬೆಳವಣಿಗೆಗೆ ಅಡ್ಡಿಯಾಗೋದು ನಮ್ಮೊಳಗೇ ಹುಟ್ಟುವ ಅನುಮಾನ. ಅವಕಾಶ ನಮ್ಮ ಮುಂದೆ ಇದ್ದರೂ, ನಮ್ಮ ಮೇಲಿನ ನಂಬಿಕೆಯ ಕೊರತೆ ಅದನ್ನು ಹಿಡಿಯಲು ಬಿಡೋದಿಲ್ಲ.

ನಿಜವಾಗಿ ನೋಡಿದರೆ, ನಮ್ಮಲ್ಲಿರುವ ಸಾಮರ್ಥ್ಯವನ್ನು ಇತರರು ಕಡಿಮೆ ಅಂದಾಜು ಮಾಡುವುದಕ್ಕಿಂತ ನಾವು ನಮ್ಮನ್ನೇ ಕಡಿಮೆ ಅಂದಾಜು ಮಾಡಿಕೊಳ್ಳುವುದು ಹೆಚ್ಚು ಅಪಾಯಕಾರಿ. ಒಂದು ಸಣ್ಣ self doubt ನಿಧಾನವಾಗಿ ದೊಡ್ಡ ಭಯವಾಗುತ್ತದೆ. ಆ ಭಯ ಪ್ರಯತ್ನವನ್ನು ನಿಲ್ಲಿಸುತ್ತದೆ. ಪ್ರಯತ್ನ ನಿಂತರೆ ಬೆಳವಣಿಗೆ ಕೂಡ ಅಲ್ಲೇ ನಿಲ್ಲುತ್ತದೆ. ಕೆಲವೊಮ್ಮೆ ನಾವು ಸೋಲೋದು ಹೊರಗಿನ ಕಾರಣಗಳಿಂದಲ್ಲ, ನಮ್ಮ ಮನಸ್ಸಿನೊಳಗಿನ “ನನಗೆ ಆಗಲ್ಲ” ಅನ್ನೋ ಮಾತಿನಿಂದ.

ಇದನ್ನೂ ಓದಿ:

ಆದರೆ ಜೀವನದಲ್ಲಿ ಒಂದು ಸತ್ಯ ಇದೆ ಆತ್ಮವಿಶ್ವಾಸ ಎಂದರೆ ಯಾವತ್ತೂ ಭಯ ಇಲ್ಲ ಅನ್ನೋದಲ್ಲ. ಭಯ ಇದ್ದರೂ, ಅನುಮಾನ ಇದ್ದರೂ, ಒಂದು ಹೆಜ್ಜೆ ಮುಂದಕ್ಕೆ ಇಡುವ ಧೈರ್ಯವೇ ನಿಜವಾದ ನಂಬಿಕೆ. ಹಲವಾರು ಯಶಸ್ವಿಯಾದವರು ಆರಂಭದಲ್ಲಿ ತಮ್ಮನ್ನೇ ಅನುಮಾನಿಸಿದ್ದರೂ, ಪ್ರಯತ್ನ ನಿಲ್ಲಿಸಲಿಲ್ಲ. ಅವರು ತಮ್ಮ ಭಯಕ್ಕಿಂತ ತಮ್ಮ ಕನಸನ್ನು ದೊಡ್ಡದಾಗಿ ನೋಡಿದರು.

ಹೀಗಾಗಿ ಜೀವನದಲ್ಲಿ ಮುಂದೆ ಸಾಗಬೇಕೆಂದರೆ, ಮೊದಲಿಗೆ ನಿಮ್ಮೊಳಗಿನ ಅನುಮಾನವನ್ನು ಗೆಲ್ಲಬೇಕು. ಇತರರು ನಿಮ್ಮನ್ನು ನಂಬುವದನ್ನು ಕಾಯಬೇಡಿ. ಮೊದಲು ನೀವು ನಿಮ್ಮ ಮೇಲೆ ನಂಬಿಕೆ ಇಡಿ. ಯಾಕೆಂದರೆ ನಿಜವಾದ ಶತ್ರು ಹೊರಗಿರುವ ಜಗತ್ತು ಅಲ್ಲ… ನಮ್ಮೊಳಗಿನ self doubt. ಅದನ್ನು ಗೆದ್ದ ಕ್ಷಣದಿಂದಲೇ ಯಶಸ್ಸಿನ ದಾರಿ ತೆರೆದುಕೊಳ್ಳುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !